ಲಿಂಗಸುಗೂರು ಶಾಸಕರ ಅಭಿಮಾನಿಗಳಿಂದ ಆಹಾರ ಪೊಟ್ಟಣಗಳ ವಿತರಣೆ
ಲಿಂಗಸುಗೂರು : ಸ್ಥಳೀಯ ಶಾಸಕ ಡಿ.ಎಸ್.ಹೂಲಗೇರಿ ಅಭಿಮಾನಿ ಬಳಗದಿಂದ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಗೂ ರೋಗಿಗಳ ಅಟೆಂಡರ್‍ಗಳಿಗೆ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಉಪಾಧ್ಯಕ್ಷ ಮಹ್ಮದ್ ರಫಿ, ಕೋವಿಡ್ ಸಂಕ್ರಮಣ ಕಾಲದಲ್ಲಿ ಎಲ್ಲಾ ಹೊಟೆಲ್, ಅಂಗಡಿಗಳನ್ನು ಮುಚ್ಚಿರುವ ಪರಿಣಾಮ ರೋಗಿಗಳ ಆರೈಕೆಗೆ ಹಾಗೂ ಇತರೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿರುವ ಜನರಿಗೆ ಊಟ, ಉಪಹಾರಕ್ಕೆ ತೀವ್ರ ತೊಂದರೆ ಆಗುತ್ತಿರುವುದನ್ನು ಗಮನಿಸಿ ಶಾಸಕರ ಅಭಿಮಾನಿ ಬಳಗದಿಂದ ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಆಹಾರ ಪೊಟ್ಟಣಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಇಂದಿನಿಂದ ಈ ಕಾರ್ಯಕ್ರಮ ಲಾಕ್‍ಡೌನ್ ಮುಗಿಯುವವರೆಗೂ ಪ್ರತಿದಿನವೂ ನಡೆಯುತ್ತದೆ ಎಂದು ತಿಳಿಸಿದರು.
ಪುರಸಭೆ ಸದಸ್ಯ ಮೌಲಾಸಾಬ ಗೌಳಿ, ಮುಖಂಡ ಪರಶುರಾಮ ನಗನೂರು ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

