ಲಿಂಗಸುಗೂರಲ್ಲಿ ಬೈಕ್ ಕಳ್ಳರ ಸೆರೆ : ನ್ಯಾಯಾಂಗ ಬಂಧನಕ್ಕೆ ಆರೋಪಿಗಳು
ಲಿಂಗಸುಗೂರು : ಪಟ್ಟಣದ ವಿವಿಧ ಏರಿಯಾಗಳಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‍ಗಳು, ಪೆಟ್ರೋಲ್ ಸೇರಿ ಬಿಡಿ ಭಾಗಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರ ತಂಡವನ್ನು ಬಂಧಿಸಿ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್‍ಐ ಪ್ರಕಾಶರೆಡ್ಡಿ ತಿಳಿಸಿದ್ದಾರೆ.
ಮುತ್ತಪ್ಪ ತಂದೆ ಚೆನ್ನಪ್ಪ (39) ಬಸವಸಾಗರ ಕ್ರಾಸ್ ಹತ್ತಿರ ಲಿಂಗಸುಗೂರು, ಅಭಿಷೇಕ್ ತಂದೆ ಪರಶುರಾಮ (17) ವಿದ್ಯಾರ್ಥಿ ವಿವೇಕಾನಂದ ನಗರ ಲಿಂಗಸುಗೂರು, ಮಲಾಸಾಬ ರಾಜಾಸಾಬ (16) ಕರ್ನಾಟಕ ಬ್ಯಾಂಕ್ ಹತ್ತಿರ ಲಿಂಗಸುಗೂರು, ಮಣಿಕಂಠ ನಾಗರಾಜ (14) ಕೋರ್ಟ್ ಹತ್ತಿರ ಲಿಂಗಸುಗೂರು, ಸಿಮ್ರಾನ್ ತಂದೆ ಸುಜ್ಞಾನಿಮಿತ್ರ (21) ಲಕ್ಷ್ಮಿಗುಡಿ ಹತ್ತಿರ ಲಿಂಗಸುಗೂರು ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ.
ಬೈಕ್ ಕಳ್ಳತನ ಮಾಡಿ ಮುತ್ತಪ್ಪ ಪಾಟೀಲ್ ಎನ್ನುವ ಮೆಕ್ಯಾನಿಕ್‍ಗೆ ಕಳ್ಳರು ಮಾರಾಟ ಮಾಡುತ್ತಿದ್ದರು. ಕಳುವಿನ ಸಾಮಗ್ರಿ ಖರೀದಿಸಿ ಮಾಡಿಫೈ ಮಾಡಿ ಮೆಕ್ಯಾನಿಕ್ ಮುತ್ತು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಎಂದು ಪೋಲಿಸರು ತಿಳಿಸಿದ್ದಾರೆ. ಆರೋಪಿಗಳಿಂದ 70 ಸಾವಿರ ರೂಪಾಯಿ ಮೌಲ್ಯದ ಬೈಕ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಡಿಮೆ ವಯಸ್ಸಿನ ಬಾಲಕರು ಇರುವುದರಿಂದ ಮೂವರನ್ನು ಬಾಲ ನ್ಯಾಯಮಂಡಳಿ ರಾಯಚೂರಿಗೆ, ಇಬ್ಬರನ್ನು ಲಿಂಗಸುಗೂರು ಜೈಲ್‍ಗೆ ಕಳುಹಿಸಲಾಗಿದೆ.
ತಾನೊಬ್ಬ ಪತ್ರಕರ್ತ ಎಂದು ಹೇಳಿಕೊಂಡು ಪಟ್ಟಣದಲ್ಲಿರುವ ಕೆಲ ಸಂಪಾದಕರ ಜೊತೆಗೆ ಓಡಾಡಿಕೊಂಡಿದ್ದ ಮುತ್ತಪ್ಪ ಎನ್ನುವಾತ ನಕಲಿ ಪತ್ರಕರ್ತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪೋಲಿಸರು ಹೆಚ್ಚಿನ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಹಾಕಬೇಕಿದೆ.

