ಹಟ್ಟಿ ಚಿನ್ನದಗಣಿ ಅದ್ಯಕ್ಷರ ನಿವಾಸಕ್ಕೆ ಸಚಿವ ಈಶ್ವರಪ್ಪ ಭೇಟಿ : ಸನ್ಮಾನ
ಲಿಂಗಸೂಗೂರು : ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ನಿವಸಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಶನಿವಾರ ಭೇಟಿ ನೀಡಿದರು. ಮನೆಗೆ ಭೇಟಿ ನೀಡಿರುವ ವಿಶೇಷ ಅತಿಥಿಯನ್ನು ವಜ್ಜಲ್ ಕುಟುಂಬವು ಗೌರವದಿಂದ ಸನ್ಮಾನಿಸಿ
ಅಭಿನಂದಿಸಿತು.
ಲಿಂಗಸುಗೂರು ಕ್ಷೇತ್ರದ ಗ್ರಾಮೀಣ ಹಾಗೂ ಪಟ್ಟಣ
ಪ್ರದೇಶಗಳಲ್ಲಿ ಇರುವ ನೀರಿನ ತೊಂದರೆ ನಿವಾರಣೆ ಮಾಡಬೇಕು.ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದುಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಮನವಿ ಮಾಡಿದರು.
ಮುಖಂಡರಾದ ನಾಗಪ್ಪ ವಜ್ಜಲ್, ಕರಿಯಪ್ಪ ವಜ್ಜಲ್, ಜಿ.ಪಂ.ಉಪಾದ್ಯಕ್ಷೆ ಗೀತಾ ಕರಿಯಪ್ಪ ವಜ್ಜಲ್, ಯುವ ನಾಯಕರಾದ ಈಶ್ವರ ವಜ್ಜಲ್, ಸಿದ್ಧರಾಮೇಶ್ವರ ಸೇರಿ ಕುಟುಂಬಸ್ಥರು ಈ ಸಂದರ್ಭದಲ್ಲಿ ಇದ್ದರು.

