ರಾಯಚೂರು

ರಾಯಚೂರು ಜಿಲ್ಲೆಯಲ್ಲಿ ಕೋವಿಡ್-19ನ ೦8 ಪ್ರಕರಣ ವರದಿ


ರಾಯಚೂರು,ಡಿ.೦೯:- ಜಿಲ್ಲೆಯಲ್ಲಿ ಡಿ.೯ರ ಬುಧವಾರ ಕೋವಿಡ್-೧೯ನ ೦೮ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದೂವರೆಗೆ ೧೩,೯೭೧ ಮಂದಿಗೆ ಕೊರೋನಾ ಸೋಂಕು ವರದಿಯಾಗಿದ್ದು, ಇಂದು ೧೭ ಜನರು ಸೇರಿದಂತೆ ಇದೂವರೆಗೆ ಒಟ್ಟಾರೆ ೧೩,೬೨೨ ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ದೇವದುರ್ಗ ತಾಲೂಕಿನಿಂದ ೧೮೩, ಲಿಂಗಸೂಗೂರು ತಾಲೂಕಿನಿಂದ ೨೩೩, ಮಾನ್ವಿ ತಾಲೂಕಿನಿಂದ ೧೪೧, ಸಿಂಧನೂರು ತಾಲೂಕಿನಿಂದ ೨೦೧ ಮತ್ತು ರಾಯಚೂರು ತಾಲೂಕಿನಿಂದ ೨೦೭ ಸೇರಿದಂತೆ ಒಟ್ಟು ೯೫೫ ಜನರ ಮಾದರಿಯನ್ನು ಕೋವಿಡ್-೧೯ ಶಂಕೆ ಹಿನ್ನಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.


ಕೋವಿಡ್-೧೯ ಪರೀಕ್ಷೆಗಾಗಿ ಕಳುಹಿಸಲಾಗಿದ್ದ ಫಲಿತಾಂಶಗಳಲ್ಲಿ ಇಂದು ಬಂದ ವರದಿಗಳಲ್ಲಿ ೮೦೨ ನೆಗೆಟಿವ್ ಆಗಿವೆ. ಒಟ್ಟಾರೆ ಜಿಲ್ಲೆಯಿಂದ ಇದೂವರೆಗೆ ೨,೦೧,೯೨೫ ಜನರ ಮಾದರಿಯನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ ೧,೮೫,೮೦೮ ವರದಿಗಳು ನೆಗೆಟಿವ್ ಆಗಿವೆ. ಉಳಿದ ೯೬೪ ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ. ಫಿವರ್ ಕ್ಲಿನಿಕ್‌ಗಳಲ್ಲಿಂದು ೫೭೧ ಜನರನ್ನು ಥರ್ಮಲ್ ಸ್ಕಿçÃನಿಂಗ್‌ಗೆ ಒಳಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!