ರೈತ ಹೋರಾಟಕ್ಕೆ ಬೆಂಬಲ : ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ
ಲಿಂಗಸುಗೂರು : ಕೇಂದ್ರ ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಸುಮರು ಎರಡು ತಿಂಗಳಿಂದ ದೆಹಲಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ರಸ್ತೆ ತಡೆಗೆ ಕರೆ ನೀಡಿದ್ದ ಅಖಿಲ ಭಾರತ ಕಿಸಾನ್ ಸಂಯುಕ್ತ ಸಂಘಟನೆಗಳ ಕರೆಯ ಮೇರೆಗೆ ಪಟ್ಟಣದ ಬಸ್ಟಾಂಡ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ರಸ್ತೆ ತಡೆ ನಡೆಸಿದ ಘಟನೆ ಜರುಗಿತು.
ರೈತರ ಹೋರಾಟಕ್ಕೆ ನಾವುಗಳು ಬೆಂಬಲವಾಗಿದ್ದೇವೆ ಎನ್ನುವ ಸೂಚನೆಯೊಂದಿಗೆ ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆ ವಿರುದ್ಧ ಹರಿಹಾಯ್ದ ಪ್ರತಿಭಟನಾಕಾರರು, ರಸ್ತೆತಡೆ ನಡೆಸಿದರು.
ಎಐಡಿವೈಓ ರಾಜ್ಯ ಉಪಾಧ್ಯಕ್ಷ ಶರಣಪ್ಪ ಉದ್ಬಾಳ, ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ, ರೈತಸಂಘ ಹಸಿರು ಸೇನೆ ತಾಲೂಕಾಧ್ಯಕ್ಷ ಶಿವಪುತ್ರಗೌಡ, ಜಿಲ್ಲಾ ಉಪಾಧ್ಯಕ್ಷ ಬಸವನಗೌಡ ಹೆಸರೂರ, ಸಿಐಟಿಯು ಕಾರ್ಯದರ್ಶಿ ಮಹ್ಮದ್ ಹನೀಫ್, ತಿರುಪತಿ ಗೋನ್ವಾರ, ಅಟೋ ಚಾಲಕರ ಸಂಘದ ಅದ್ಯಕ್ಷ ಬಾಬಾ ಜಾನಿ ಪ್ರಾಂತ ರೈತ ಸಂಘ ಸದಸ್ಯರು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಇದ್ದರು.

