ಲಿಂಗಸುಗೂರು-ತಿಂಥಣಿಬ್ರಿಜ್ ಹೆದ್ದಾರಿಗೆ ಸೂಚನಾ ಫಲಕಗಳ ಅಳವಡಿಕೆ
ಲಿಂಗಸುಗೂರು : ಪಟ್ಟಣದಿಂದ ತಿಂಥಣಿಬ್ರಿಜ್ ವರೆಗಿನ ಹೆದ್ದಾರಿಯಲ್ಲಿ ಅನೇಕ ತಿರುವುಗಳಿದ್ದು, ಹೊಸತಾಗಿ ಈ ರಸ್ತೆಯಲ್ಲಿ ಓಡಾಡುವ ವಾಹನಗಳ ಚಾಲಕರುಗಳಿಗೆ ತಿರುವುಗಳ ಬಗ್ಗೆ ಮಾಹಿತಿ ಇಲ್ಲದೇ ಇರುವ ಪರಿಣಾಮ ಆಗಾಗ್ಗೆ ಅಪಘಾತಗಳು ಸಂಭಿಸುವುದು ಸಾಮಾನ್ಯವಾಗಿವೆ. ಇದನ್ನು ತಡೆಗಟ್ಟಲು ಸಿಪಿಐ ಮಹಾಂತೇಶ್ ಸಜ್ಜನ್‍ರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸರ್ವೆ ಮಾಡಿ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾದರು.
ಲಿಂಗಸುಗೂರು-ತಿಂಥಣಿಬ್ರಿಜ್ ವರೆಗಿನ ಸುಮಾರು 30 ಕಿ.ಮೀ. ರಸ್ತೆಯಲ್ಲಿ ಇರುವ ತಿರುವುಗಳು, ವೇಗದ ಮಿತಿ, ಹಳ್ಳಗಳು ಸೇರಿ ನಾನಾ ಮಾಹಿತಿ ಇರುವ ಸೂಚನಾ ಫಲಕಗಳ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿರುವುದು ಸಾರ್ವಜನಿಕರ ಮತ್ತು ವಾಹನ ಚಾಲಕರ ಪ್ರಶಂಸೆಗೀಡಾಗಿದೆ.
ಸಿಪಿಐ ಮಹಾಂತೇಶ ಸಜ್ಜನ್ ಲಿಂಗಸುಗೂರು ವೃತ್ತಕ್ಕೆ ವರ್ಗವಾಗಿ ಬಂದಾಗಿನಿಂದ ಒಂದಿಲ್ಲೊಂದು ಜನೋಪಕಾರಿ ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

