ಅಕ್ಷರಾ ಫೌಂಡೇಶನ್‍ನಿಂದ ಉಚಿತ ಮಾಸ್ಕ್‍ಗಳ ವಿತರಣೆ
ಲಿಂಗಸುಗೂರು : ತಾಲೂಕಿನ 168 ಗ್ರಾಮಗಳಲ್ಲಿನ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರಿಗೆ ಅಕ್ಷರಾ ಫೌಂಡೇಶನ್ ವತಿಯಿಂದ 3360 ಎನ್95 ಉಚಿತವಾಗಿ ಮಾಸ್ಕ್‍ಗಳನ್ನು ವಿತರಣೆ ಮಾಡಲಾಯಿತು.
ಜಿಲ್ಲಾ ಸಂಯೋಜಕ ಅಡಿವೇಶ ನೀರಲಕೇರಿ ಮಾತನಾಡಿ, ಗಣಿತ ಕಲಿಕಾ ಆಂದೋಲನ ಯೋಜನೆಯು ಅನುಷ್ಠಾನಗೊಂಡು ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಗುಣಮಟ್ಟದ ಕಲಿಕೆಗಾಗಿ ಎಲ್ಲಾ ಶಾಲೆಗಳಿಗೆ 22 ಪಾಠೋಪಕರಣ ಇರುವ ಕಿಟ್‍ಗಳನ್ನು ವಿತರಿಸಲಾಗಿದೆ. ಕೋವಿಡ್ -19 ಸಂದರ್ಭದಲ್ಲಿ ಶಾಲೆಗಳು ಆರಂಭಕ್ಕೂ ಮುನ್ನ ಜಾಗೃತಿ ಮೂಡಿಸಲು ಫೌಂಡೇಶನ್‍ನಿಂದ ವಿಭಾ ಸಂಸ್ಥೆಯ ಸಹಯೋಗದಲ್ಲಿ ಪ್ರತಿ ಗ್ರಾಮದಲ್ಲೂ ಉಚಿತವಾಗಿ ಮಾಸ್ಕ್‍ಗಳನ್ನು ವಿತರಿಸಲಾಗುತ್ತಿದೆ ಎಂದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ, ಕ್ಷೇತ್ರ ಸಮನ್ವಯ ಅಧಿಕಾರಿ ಹನುಮಂತಪ್ಪ ವೈ., ತಾಲೂಕು ಯೋಜನಾಧಿಕಾರಿ ಮಹೆಬೂಬ, ಅಕ್ಷರದಾಸೋಹ ಅಧಿಕಾರಿ ಚಂದ್ರಶೇಖರ ಕುಂಬಾರ, ವ್ಯವಸ್ಥಾಪಕ ಪ್ರಮೋದ್ ಸೇರಿ ಇತರರು ಇದ್ದರು.

