ಹಟ್ಟಿ ಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಅವರಿಂದ ವಿಶೇಷ ಸಭೆ ಉತ್ಪಾದನಾ ಸಾಮರ್ಥ್ಯ ಹೆಚ್ಚಳ, ಕಾರ್ಮಿಕರಿಗೆ ಬೋನಸ್ ನೀಡಲು ಸೂಚನೆ
ಲಿಂಗಸುಗೂರು : ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಶೀಘ್ರ ಕಾರ್ಮಿಕರಿಗೆ ಬೋನಸ್ ವಿತರಣೆ ಸೇರಿ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ವಿಶೇಷ ಸಭೆಯನ್ನು ಕರೆಯಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಂಪನಿಯ ಅಧ್ಯಕ್ಷರಾದ ಮಾನಪ್ಪ ಡಿ. ವಜ್ಜಲ್ ರು, ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನ ದ್ವಿ ಗುಣ ಗೊಳಿಸುವುದು, ಕಂಪನಿಯ ಜೀವಾಳವಾಗಿರು ಎಲ್ಲಾ ಕಾರ್ಮಿಕರಿಗೆ ಇದೆ ಶನಿವಾರದೊಳಗೆ ಬೋನಸ್ ನೀಡಬೇಕು. ಅನುಕಂಪದ ಅಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ಮಾಡಬೇಕು. ಉತ್ತಮ ರೀತಿಯ ಆಡಳಿತ ವ್ಯವಸ್ಥೆಯನ್ನ ನಿರ್ಮಿಸಬೇಕು ಎಂದು ಸೂಚಿಸಿದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಸಲ್ಮಾ ಕೆ. ಪಾಹಿಮಾ, ನಿರ್ದೇಶಕರಾದ ಶ್ರೀನಿವಾಸ ಮಲದಕಲ್ಲ್ ಸೇರಿ ಕಂಪನಿಯ ನಾನಾ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

