ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ : ಎಐಡಿವೈಓ ಕಾರ್ಯಕರ್ತರ ಬೆಂಬಲ
ಲಿಂಗಸುಗೂರು : ದೇಶದ ಸಿಂಘು ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಅನ್ನದಾತರ ಪ್ರತಿಭಟನೆಗೆ ಎಐಡಿವೈಓ ಕಾರ್ಯಕರ್ತರು ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ದೆಹಲಿ, ಹರಿಯಾಣ, ರಾಜಸ್ಥಾನ, ಪಂಜಾಬ್, ಚಂಡಿಗಡ, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ್, ಛತ್ತೀಸ್‍ಗಡ ಸೇರಿ ದೇಶದ ಹಲವು ರಾಜ್ಯಗಳಿಂದ ಗಡಿ ಭಾಗಕ್ಕೆ ಬಂದು ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರನ್ನು ಉದ್ದೇಶಿಸಿ ಸಂಘಟನೆಯ ಅಖಿತ ಭಾರತ ಉಪಾದ್ಯಕ್ಷ ಜಯೇಶ್ ಪಟೇಲ್ ಮಾತನಾಡುತ್ತಾ, ಅನ್ನದಾತರ ಹೋರಾಟದ ಜೊತೆಗೆ ನಮ್ಮ ಯುವಜನ ಸಂಘಟನೆ ಬೆಂಬಲಿಸುತ್ತಿದೆ. ಕೊನೆಯವರೆಗೂ ಹೆಗಲಿಗೆ ಹೆಗಲು ಕೊಟ್ಟು ನಮ್ಮ ಸಂಘಟನೆ ಹೋರಾಟಕ್ಕೆ ನಿಲ್ಲುತ್ತದೆ ಎಂದರು.
ತಾಲೂಕಿನ ಮುಖಂಡರುಗಳು ರೈತರ ಪ್ರತಿಭಟನಾ ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಿರುವುದು ರಾಜ್ಯದ ರೈತರಲ್ಲೂ ಹುಮ್ಮಸ್ಸು ಮೂಡಿದಂತಾಗಿದೆ. ಕರ್ನಾಟಕ ರಾಜ್ಯದಿಂದಲೂ ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳು ರೈತರು ತೆರಳುತ್ತಿದ್ದಾರೆ. ದೇಶದ ಅನ್ನದಾತರು ಒಕ್ಕೊರಲಿನಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವುದು ಒಗ್ಗಟ್ಟಿನ ಶಕ್ತಿಯಾಗಿದೆ. ಕೂಡಲೇ ರೈತರ ಹೋರಾಟಕ್ಕೆ ಕೇಂದ್ರ ಸರಕಾರ ಸ್ಪಂಧಿಸಬೇಕೆನ್ನುವ ಆಗ್ರಹಗಳು ವ್ಯಕ್ತವಾಗುತ್ತಿವೆ.
ಸಂಘಟನೆ ಜಿಲ್ಲಾದ್ಯಕ್ಷ ಶರಣಪ್ಪ ಉದ್ಬಾಳ ಸೇರಿ ಅನೇಕ ಸಂಗಾತಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

