ರಾಷ್ಟ್ರೀಯ ಯುವ ದಿನಾಚರಣೆ
ರಾಷ್ಟ್ರೀಯ ಯುವ ದಿನಾಚರಣೆ
ಲಿಂಗಸುಗೂರು : ಸ್ವಾಮಿ ವಿವಕಾನಂದರ ಜಯಂತಿ ಅಂಗವಾಗಿ ಸ್ಥಳೀಯ ಸಂಗಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಪ್ರಾಚಾರ್ಯ ವೈ. ಬಸವರಾಜ, ಸ್ವಾಮಿ ವಿವೇಕಾನಂದರು ಭಾರತದ ಹಿರಿಮೆಯನ್ನು ವಿಶ್ವ ಮಟ್ಟದಲ್ಲಿ ಸಾರಿದ ಮಹಾನ್ ವೀರವಿರಾಗಿಯಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಯುವಕರು ಸಚ್ಛಾರಿತ್ರ್ಯ, ದೇಶಪ್ರೇಮ ಮೈಗೂಡಿಸಿಕೊಂಡು ದೇಶದ ಸಂಪತ್ತಾಗಬೇಕು ಎಂದು ಕರೆ ನೀಡಿದರು.
ಮಹಾವಿದ್ಯಾಲಯದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

