ಲಿಂಗಸುಗೂರು : ಸೋಮವಾರದಿಂದ ಕೋವಿಡ್ ಕೇರ್ ಸೆಂಟರ್ ಆರಂಭ
ಲಿಂಗಸುಗೂರು : ಕರೋನಾ ಮಹಾಮಾರಿಯ ಎರಡನೇ ಅಲೆಯು ರಾಜ್ಯವ್ಯಾಪಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬೆಳಕಿಗೆ ಬರುವ ಪಾಸಿಟಿವ್ ಕೇಸ್‍ಗಳ ಚಿಕಿತ್ಸೆಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್‍ಅನ್ನು ಆರಂಭಿಸಲಾಗಿದೆ. ಇದು (ನಾಳೆ) ಸೋಮವಾರದಿಂದ ಕಾರ್ಯಾರಂಭ ಮಾಡಲಿದೆ ಎಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್ ಹೇಳಿದರು.
ಈ ಸೆಂಟರ್‍ನಲ್ಲಿ 10 ಹಾಸಿಗೆಗಳನ್ನು ಹಾಕಲಾಗಿದೆ. ಇಲ್ಲಿಗೆ ಬರುವ ರೋಗಿಗೆ ಆರಂಭಿಕ ಚಿಕಿತ್ಸೆ ನೀಡಲಾಗುವುದು. 5 ದಿನಗಳ ವರೆಗೆ
ರೋಗಿಗೆ ದಾಖಲಿಸಿಕೊಳ್ಳಲಾಗುವುದು. ಐದು ದಿನಗಳಾದರೂ ಜ್ವರ
ತಹಬಂದಿಗೆ ಬಾರದೇ ಇದ್ದಲ್ಲಿ, ರಾಯಚೂರು ರಿಮ್ಸ್ ಆಸ್ಪತ್ರೆಗೆ
ರವಾನಿಸಲಾಗುವುದು ಎಂದು ಡಾ.ರುದ್ರಗೌಡ ಹೇಳಿದರು.
ಸೋಮವಾರದಿಂದ ಆರಂಭಗೊಳ್ಳಲಿರು ಈ ಸೆಂಟರ್‍ನಲ್ಲಿ
ಸಿಬ್ಬಂಧಿಗಳನ್ನು ನೇಮಕ ಮಾಡಲಾಗುವುದು. ಚಿಕಿತ್ಸೆಗೆಂದು
ದಾಖಲಾಗುವ ರೋಗಿಗಳ ನಿಗರಾನಿ ಇಡಲಾಗುತ್ತದೆ. ಆದಷ್ಟು ಜನರು ಈ
ಕೋವಿಡ್ ಕೇರ್ ಸೆಂಟರ್‍ಗೆ ಬಾರದೇ ಆರೋಗ್ಯವಂತರಾಗಿ ಇರಬೇಕೆಂದು
ನಾವುಗಳೂ ದೇವರಲ್ಲಿ ಪ್ರಾರ್ಥಿಸುತ್ತೇವೆಂದು ಹೇಳಿದರು.

