ತಾಲೂಕಾ ಹಡಪದ ಅಪ್ಪಣ್ಣ ಯುವಕ ಸಂಘದ ಅಧ್ಯಕ್ಷರಾಗಿ ಶರಣಬಸವ
ಲಿಂಗಸುಗೂರು : ತಾಲೂಕು ಹಡಪದ ಅಪ್ಪಣ್ಣ ಯುವಕ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಶರಣಬಸವ ಈಚನಾಳ, ಉಪಾಧ್ಯಕ್ಷರಾಗಿ ವೀರೇಶ ಗುಂಡಸಾಗರ್, ಪ್ರಧಾನ ಕಾರ್ಯದರ್ಶಿ ಚುಡಾಮಣಿ ಚಿತ್ತಾಪುರ, ಗೌರವ ಅಧ್ಯಕ್ಷರಾಗಿ ಕುಮಾರಸ್ವಾಮಿ ಕಸಬಾಲಿಂಗಸಗೂರು, ಕಾರ್ಯಾಧ್ಯಕ್ಷರಾಗಿ ಮುತ್ತಣ್ಣ ಗುಡಿಹಾಳ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಸ್ಥಾನಗಳಾದ ಖಜಾಂಚಿ ಚನ್ನಪ್ಪ ಆನೆಹೊಸುರು, ಸಂಘಟನಾ ಕಾರ್ಯದರ್ಶಿಗಳಾಗಿ ನಾಗರಾಜ್ ಗುಡದನಾಳ, ಅಶೋಕ್ ಕರಡಕಲ್, ಮಂಜುನಾಥ ಸರ್ಜಾಪುರ, ಕಾನೂನು ಸಲಹೆಗಾರರಾಗಿ ವೀರೇಶ ಕಸಬಾ ಲಿಂಗಸಗೂರು ವಕೀಲರು, ಮುದುಗಲ್ ವಲಯ ಅಧ್ಯಕ್ಷರಾಗಿ ಹುನುಮಂತ, ಹಟ್ಟಿ ವಲಯ ಅಧ್ಯಕ್ಷರಾಗಿ ಚನ್ನಬಸವ ಗೆಜ್ಜಲಗಟ್ಟಾ ಆಯ್ಕೆ ಯಾಗಿದ್ದಾರೆ.

