ರಾಯಚೂರು

ಚಿನ್ನದಗಣಿಯಲ್ಲಿ ಅನ್‍ಫೀಟ್ ಸ್ಕೀಮ್‍ನಡಿ ಕೆಲಸ : ಮರು ಜಾರಿಗೆ ಆಗ್ರಹ

ಲಿಂಗಸುಗೂರು : ತಾಲೂಕಿನ ಹಟ್ಟಿ ಚಿನ್ನದಗಣಿ ಕಾರ್ಮಿಕರ ಮೆಡಿಕಲ್ ಅನ್‍ಫಿಟ್ ಅಡಿಯಲ್ಲಿ ಅವರ ಮಕ್ಕಳಿಗೆ ಕಂಪನಿಯಲ್ಲಿ ಕೆಲಸ ಕೊಡುವ ಸ್ಕೀಮ್‍ನ್ನು ಮರು ಜಾರಿಗೊಳಿಸಬೇಕೆಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.

ಶಾಸಕ ಡಿ.ಎಸ್. ಹೂಲಗೇರಿಯವರಿಗೆ ಮನವಿ ಸಲ್ಲಿಸಿದ ಅವರು, ರಾಜ್ಯ ಸರಕಾರ ಹೊರಡಿಸಿದ ಸುತ್ತೋಲೆಯಂತೆ ಹಟ್ಟಿ ಚಿನ್ನದಗಣಿಯ ಸಿಬ್ಬಂಧಿ ಹಾಗೂ ಕಾರ್ಮಿಕರಿಗೆ 2014 ರಿಂದ 2017ನೇ ಸಾಲಿನವರಿಗೆ ಅನಾರೋಗ್ಯದಿಂದ ಕಂಪನಿ ಕೆಲಸ ಮಾಡಲು ಆಗದಿರುವವರಿಗೆ ಮೆಡಿಕಲ್ ಅನ್‍ಫಿಟ್ ಅಡಿಯಲ್ಲಿ 516 ಕಾರ್ಮಿಕರಿಗೆ ನಿವೃತ್ತಿ ಮಾಡಿ ಅವರ
ಮಕ್ಕಳನ್ನು ಕಂಪನಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ಆದರೆ,
ದಿಢೀರನೇ ಜೂನ್ 26, 2018ರಂದು ನಡೆದ 406ನೇ ಕಂಪನಿಯ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಅನಾರೋಗ್ಯಕ್ಕೊಳಗಾಗಿ ಕೆಲಸದಿಂದ ಅನ್‍ಫಿಟ್ ಆಗುವ ಕಾರ್ಮಿಕರ ಮಕ್ಕಳಿಗೆ ಕೆಲಸಕೊಡುವ ಬದಲು ಹಣದ ಮೊತ್ತ ನಿಗದಿಪಡಿಸಿ, 2017ನೇ ಸಾಲಿನವರಿಗೆ ಜಾರಿಯಲ್ಲಿದ್ದ ಅನ್‍ಫಿಟ್ ಸ್ಕೀಮನ್ನು ನಿಲ್ಲಿಸಲಾಯಿತು.

ನಂತರ ಕಂಪನಿಗೆ ನೇಮಕವಾದ ನೂತನ ಅದ್ಯಕ್ಷ
ಟಿ.ರಘುಮೂರ್ತಿಯವರು ನಮ್ಮ ಸಂಘದ ಸದಸ್ಯರೊಂದಿಗೆ
ಪತ್ರ ವ್ಯವಹಾರ ಮಾಡಿ ನಮ್ಮ ಮನವಿಗೆ ಸ್ಪಂಧಿಸಿ, ನಮ್ಮಿಂದ
ಕಲ್ಲಿದ್ದಲು ಗಣಿ (ಶಿಂಗ್ರೆಣಿ)ಯಲ್ಲಿ ಜಾರಿಯಲ್ಲಿರುವ ಕಾರ್ಮಿಕರ ಮೆಡಿಕಲ್ ಅನ್‍ಫಿಟ್ ಸ್ಕೀಮ್‍ನ ಕಾಗದ ಪತ್ರಗಳು,ನೇಮಕಗೊಂಡಿರುವ ಕಾರ್ಮಿಕರ ಮಕ್ಕಳ ಪಟ್ಟಿಯ ಪ್ರತಿ ಪಡೆದುಕೊಂಡು ಚಿನ್ನದಗಣಿಗೆ ಭೇಟಿ ಕೊಟ್ಟು, ಕಾರ್ಮಿಕರ ಕಷ್ಟ, ಸಮಸ್ಯೆಗಳನ್ನು ಅರ್ಥೈಸಿಕೊಂಡು ಕಂಪನಿಯ 412ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಪುನಃ ಕಾರ್ಮಿಕರ ಮೆಡಿಕಲ್ ಅನ್‍ಫಿಟ್ ಮತ್ತು ವಿಆರ್‍ಎಸ್ ಸ್ಕೀಮ್‍ಗಳ ಬಗ್ಗೆ ಪರಿಶೀಲಿಸಿ ವರದಿ ಒಪ್ಪಿಸಲು ಸಮಿತಿಯನ್ನು ರಚನೆ ಮಾಡಲು ತೀರ್ಮಾನಿಸಿದರು.

ಮುಂದೆ 143ನೇ ಕಂಪನಿಯ ನಿರ್ದೇಶಕ ಮಂಡಳಿ ಸಭೆಯಲ್ಲಿ ಅನ್‍ಫಿಟ್ ವಿಷಯದ ಕುರಿತು ಚರ್ಚೆಯಾಗಿ ಪುನಃ ಎರಡು ಸದಸ್ಯರ ಸಮಿತಿ ರಚಿಸಿ,ನಿರ್ದೇಶಕ ಮಂಡಳಿ ತೀರ್ಮಾನಿಸಿ ನಡುವಳಿ ನಮಗೆ ನೀಡಲಾಗಿದೆ.ನೂತನವಾಗಿ ಕಂಪನಿಗೆ ನೇಮಕವಾಗಿರು ಅದ್ಯಕ್ಷರು ಹಾಗೂ ಎಂಡಿಯವರು ನಮ್ಮ ಬೇಡಿಕೆ ಪತ್ರಕ್ಕೆ ಮಾನ್ಯತೆ ಕೊಟ್ಟು,
ಕಂಪನಿಯ ನಿರ್ದೇಶಕ ಮಂಡಳಿ ಮೂರು ಸಭೆಗಳಲ್ಲಿ ಸದರಿ
ವಿಷಯದ ಕುರಿತು ಆಗಿರುವ ಚರ್ಚೆಯ ಬಗ್ಗೆ ವರದಿಯನ್ನು
ನೀಡಿಲ್ಲ.

ಏಕಾಏಕಿ ನೂತನ ಅದ್ಯಕ್ಷರು ಪತ್ರಿಕೆಗಳಲ್ಲಿ ಕಾರ್ಮಿಕರ
ಮಕ್ಕಳಿಗೆ ಕಂಪನಿಯಲ್ಲಿ ಕೆಲಸವಿಲ್ಲವೆಂದು ಹೇಳಿಕೆ
ಕೊಟ್ಟಿರುವುದನ್ನು ನಾವುಗಳು ವಿರೋಧಿಸುತ್ತೇವೆ. ಗಣಿ
ಕಾರ್ಮಿಕರಿಗಾಗಿ ಹಿಂದಿನಿಂದ ನಡೆದುಕೊಂಡು ಬಂದಿರುವ ವಿಆರ್‍ಎಸ್ ಅಥವಾ ಮೆಡಿಕಲ್ ಅನ್‍ಫಿಟ್ ಯೋಜನೆಗಳು ಪುನರ್ ಆರಂಭ ಮಾಡಬೇಕೆಂದು ಮುಖಂಡರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕಾರ್ಮಿಕ ಸಂಘದ ಅದ್ಯಕ್ಷ ರೇವಣಸಿದ್ದಪ್ಪ,ಪ್ರಧಾನಕಾರ್ಯದರ್ಶಿ ಎಂ.ಡಿ.ಅಮೀರ್‍ಅಲಿ, ಟಿಯುಸಿಐ ಹಟ್ಟಿ ಘಟಕದ ಅದ್ಯಕ್ಷ ಡಿ.ಕೆ.ಲಿಂಗಸಗೂರು, ಕಾರ್ಯದರ್ಶಿ ಮೆಹಬೂಬ ಬೈಚಬಾಳ್,ಗುಡದಪ್ಪ ಬಂಡಾರಿ, ಚೆನ್ನಪ್ಪ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!