ಪಡಿತರ ದಾಸ್ತಾನು ಸಂಗ್ರಹ ಗೋದಾಮುಗಳ ಸ್ಥಳಾಂತರಕ್ಕೆ ಆಗ್ರಹ
ಲಿಂಗಸುಗೂರು : ಪಟ್ಟಣದ ಸಂತೆಬಜಾರ್ ಬಳಿ ಇರುವ ಆಹಾರ ಇಲಾಖೆಯ ಪಡಿತರ ಧಾನ್ಯ ಸಂಗ್ರಹಿಸುವ ಎರಡು ಗೋದಾಮುಗಳು ನಿರುಪಯುಕ್ತವಾಗಿದ್ದು, ಅವುಗಳನ್ನು ಅಲ್ಲಿಂದ ಸ್ಥಳಾಂತರಿಸಿ ಆ ಜಾಗೆಯನ್ನು ಬಡವರಿಗೆ, ಕೂಲಿಕಾರ್ಮಿಕರಿಗೆ ಹಂಚಿಕೆ ಮಾಡಬೇಕೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.
ಸಹಾಯಕ ಆಯುಕ್ತರಿಗೆ ಬರೆದ ಮನವಿಯನ್ನು ಶಿರಸ್ತೆದಾರ
ಶಾಲಂಸಾಬರಿಗೆ ಸೋಮವಾರ ಸಲ್ಲಿಸಿದ ಅವರು, ಹತ್ತಾರು ವರ್ಷಗಳಿಂದ ಟೀನ್‍ಶೆಡ್‍ನಿಂದ ನಿರ್ಮಿಸಿರುವ ಗೋದಾಮುಗಳಲ್ಲಿ ಯಾವುದೇ ಚಟುವಟಿಕೆ ಇಲ್ಲದೇ ಪಾಳು ಬಿದ್ದಿವೆ.ಹಾಕಿರುವ ಟೀನ್‍ಗಳೆಲ್ಲಾ ತುಕ್ಕುಹಿಡಿದು ಕೆಲಸಕ್ಕೆ ಬಾರದಂತಾಗಿದೆ.ಅಲ್ಲದೇ ಗೋದಾಮು ಸುತ್ತಮುತ್ತ ಇಕ್ಕಟ್ಟಾದ ರಸ್ತೆಗಳಿರುವ ಪರಿಣಾಮ ಪಡಿತರ ಹೊತ್ತು ಬರುವ ಲಾರಿಗಳಿಗೆ ದಾರ ಇಲ್ಲದಂತಾಗಿದೆ.ಈಗಾಗಲೇ ಎಪಿಎಂಸಿ ಆವರಣದಲ್ಲಿರುವ ಗೋದಾಮುಗಳಲ್ಲಿ ಆಹಾರ ಇಲಾಖೆಯವರು ಪಡಿತರ ಧಾನ್ಯ ಸಂಗ್ರಹಿಸುತ್ತಿದ್ದಾರೆ. ನಿರುಪಯುಕ್ತವಾಗಿರುವ ಈ ಗೋದಾಮುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಜೊತೆಗೆ ಈ ಪ್ರದೇಶದಲ್ಲಿ ವಾಸಿಸುತ್ತಿರುವ ನಿರ್ಗತಿಕ, ಬಡ ಕುಟುಂಬಗಳನ್ನು
ಗುರುತಿಸಿ ಅವರಿಗೆ ನಿವೇಶನಗಳನ್ನು ಮಾಡಿ ಹಂಚಬೇಕೆಂದು
ಕಾರ್ಯಕರ್ತರು ಒತ್ತಾಯಿಸಿದರು.
ಸಂಘಟನೆ ಅದ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು, ಪ್ರಧಾನ
ಕಾರ್ಯದರ್ಶಿ ರಮೇಶ ಗುತ್ತೇದಾರ, ಮೌನೇಶ ರೆಡ್ಡಿ, ರವಿ
ಗೊರೆಬಾಳ, ಬಸವರಾಜ ಕಕ್ಕೇರ, ಸೂರಿ ಕುಪ್ಪಿಗುಡ್ಡ, ಅಭಿಷೇಕ,ರಾಮು,ಆಕಾಶಕುಮಾರ,ಹೈದರ್,ರಾಮಚಂದ್ರರೆಡ್ಡಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.
