ಕಲಬುರಗಿ ರೈಲ್ವೆ ವಲಯ ರದ್ದು : ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ
ಕಲಬುರಗಿ ರೈಲ್ವೆ ವಲಯ ರದ್ದು :
ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ
ಲಿಂಗಸೂಗೂರು : ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ರೈಲ್ವೆ ವಲಯವನ್ನು ರದ್ದು ಮಾಡಿರುವ ಕೇಂದ್ರ ಸರಕಾರದ ರೈಲ್ವೆ ಇಲಾಖೆಯ ಮೋಸದ ನೀತಿಯನ್ನು ಖಂಡಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಸಹಾಯಕ ಆಯುಕ್ತರ ಕಚೇರಿ ಸಿಬ್ಬಂಧಿ ಮೂಲಕ
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು, ಸರಿನ್ ಕಮೀಟಿ ವರದಿ ಅನ್ವಯ 2014ರಲ್ಲಿಯೇ ಕಲಬುರಗಿಯಲ್ಲಿ ಸ್ಥಾಪಿಸಲಾಗಿದ್ದ ರೈಲ್ವೆ ವಲಯ ಕಚೇರಿಯನ್ನು ರದ್ದು ಮಾಡಿ ಕಲ್ಯಾಣ ಕರ್ನಾಟಕಕ್ಕೆ ಮೋಸ ಮಾಡಿರುವ ಕೇಂದ್ರ ರೈಲ್ವೆ ಇಲಾಖೆಯ ಮೋಸದ ನೀತಿ ಖಂಡನೀಯ.
ಸೊಲ್ಲಾಪೂರ ಮ್ತತು ಸಿಕಂದರಾಬಾದ್ ರೈಲ್ವೆ ವಲಯಗಳಲ್ಲಿ
ಹಂಚಿ ಹೋಗಿರುವ ಕಲಬುರಗಿ ವಿಭಾಗ ಈ ಎರಡೂ ವಲಯಗಳಿಗೆ ಹೆಚ್ಚು ಆದಾಯ ತಂದುಕೊಡುವ ಕೇಂದ್ರ ಸ್ಥಾನವೂ ಆಗಿದೆ. ಕಲ್ಯಾಣ ಕರ್ನಾಟಕದ ಪ್ರಮುಖ ಆರ್ಥಿಕ ಮತ್ತು ವಾಣಿಜ್ಯ ನಗರಿಯಾದ ಕಲಬುರಗಿಗೆ ತನ್ನದೇ
ಆದ ಇತಿಹಾಸವಿದೆ. ತೊಗರಿ ಖಣಜವಾಗಿರು ಈ ಪ್ರದೇಶ ಸಿಮೆಂಟ್ ಸೇರಿ ಪ್ರಮುಖ ವಾಣಿಜ್ಯ ವ್ಯಾಪಾರದ ಮಾರುಕಟ್ಟೆಯಾಗಿದೆ. 371 ಕಲಂ ಜಾರಿಯಾಗಿದ್ದರೂ
ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಅನುಷ್ಠಾನದ ಹಂತದಲ್ಲಿಯೇ ಇದೆ. ಹಿಂದುಳಿದ ಹಣೆಪಟ್ಟಿ ತೆಗೆದುಹಾಕುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳು ಬಹಳಷ್ಟಿವೆ. ಕೂಡಲೇ ರದ್ದಾಗಿರುವ ರೈಲ್ವೆ ವಲಯವನ್ನು ಮಂಜೂರು ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಅದ್ಯಕ್ಷ ಜಗದೀಶ ಪಾಟೀಲ್, ಮೈಕಲ್ ತ್ಯಾಗರಾಜ,ಅರುಣಕುಮಾರ, ಪ್ರವೀಣ ಕುಮಾರ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

