ತುರ್ತು ನಿರ್ವಹಣಾ ಕಾರ್ಯ : ಇಂದು ವಿದ್ಯುತ್ ವ್ಯತ್ಯಯ
ಲಿಂಗಸುಗೂರು : ತಾಲೂಕಿನ ನಾಗಲಾಪೂರ 33 ಕೆ.ವಿ. ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯದ ಪರಿಣಾಮ ಈ ಕೇಂದ್ರದ ವ್ಯಾಪ್ತಿಯಲ್ಲಿ ಇಂದು (ಜುಲೈ 5, ಸೋಮವಾರ) ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆಂಚಪ್ಪ ಭಾವಿಮನಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಉಪಕೇಂದ್ರ ವ್ಯಾಪ್ತಿಯ ಪಿಕಳಿಹಾಳ, ಛತ್ತರ, ನಾಗಲಾಪೂರ, ಅಂಕಲಿಮಠ, ಮಾಕಾಪೂರ ಫೀಡರ್‍ಗಳಲ್ಲಿ ಸಂಜೆಯವರೆಗೂ ವಿದ್ಯುತ್ ಸರಬರಾಜು ನಿಲುಗಡೆ ಮಾಡಲಾಗುತ್ತದೆ. ಈ ಗ್ರಾಮಗಳಲ್ಲಿನ ವಿದ್ಯುತ್ ಬಳಕೆಯ ಗ್ರಾಹಕರು ಸಹಕರಿಸುವಂತೆ ಕೋರಿದ್ದಾರೆ.

