ಸ್ವರ-ಸಂಗೀತ ಲೋಕದ ಮಾಂತ್ರಿಕ ಮಹ್ಮದ್‍ರಫಿ ಜನ್ಮದಿನಾಚರಣೆ
ಲಿಂಗಸುಗೂರು : ಬಾಲಿವುಡ್, ಸ್ಯಾಂಡಲ್‍ವುಡ್, ಕಾಲಿವುಡ್ ಸೇರಿದಂತೆ ಸಾವಿರಾರು ಧಾರ್ಮಿಕ, ಖವ್ವಾಲಿಗಳನ್ನು ಹಾಡುವ ಮೂಲಕ ಸಂಗೀತ ಲೋಕದ ಮಾಂತ್ರಿಕ ಎನಿಸಿಕೊಂಡಿರುವ ಖ್ಯಾತ, ಸುಪ್ರಸಿದ್ಧ ಹಿನ್ನೆಲೆ ಗಾಯಕ ಮೊಹ್ಮದ್ ರಫಿಯವರ 96ನೇ ಜನ್ಮ ದಿನಾಚರಣೆಯನ್ನು ಸ್ಥಳೀಯ ಸರ್‍ಗಮ್ ಕರೋಕೆಯಲ್ಲಿ ಆಚರಣೆ ಮಾಡಲಾಯಿತು.
ಇವತ್ತಿನ ಯುವ ಸಂಗೀತ ಪ್ರೀಯರಿಗೆ ಮೊಹ್ಮದ್‍ರಫಿಅವರು ಹಾಕಿಕೊಟ್ಟ ಮಾರ್ಗಗಳು ದಾರಿದೀಪವಾಗಿವೆ. ಸ್ವರ ಸಾಮ್ರಾಟರಾಗಿದ್ದ ಅವರ ಧ್ವನಿ ಅಚ್ಚಹಸಿರಾಗಿ ದೇಶದ ಸಂಗೀತ ಪ್ರೀಯರಲ್ಲಿ ಉಳಿದುಕೊಂಡಿದೆ. ಸಂಗೀತ ದಿಗ್ಗಜರೇ ರಫಿಯವರ ಗಾಯನಕ್ಕೆ ಮಾರುಹೋಗಿರುವುದು ಇತಿಹಾಸ. ಮೊಹ್ಮದ್ ರಫಿ ಎಂದರೆ ಇಂದಿಗೂ ಯುವ ಮನಸ್ಸುಗಳಲ್ಲಿ ಪುಳಕವನ್ನುಂಟು ಮಾಡುವ ಗೀತೆಗಳು ಹೊರಹೊಮ್ಮುತ್ತವೆ.
ಬಹಾರೋ ಫೂಲ್ ಬರಸಾವೋ ಮೆರಾ ಮಹೆಬೂಬ ಆಯಾಹೈ, ಏ ರೇಶಿಮಿ ಜುಲ್ಫೆ ಏ ಶರ್ಬತಿ ಆಂಖೆ, ಓ ಪ್ರಿಯತಮಾ ನಾ ಮದಿನಿನ್ನು ಪಿಲಿಚಿಂದಿಗಾನಮೈ ವೇಣು ಗಾನಮೈ ನಾ ಪ್ರಾಣಮೈ, ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ, ಸೌ ಬಾರ್ ಜನಮ್ ಲೇಂಗೆ ಸೌಬಾರ್ ಫನಾ ಲೇಂಗೆ ಸೇರಿ ಹತ್ತಾರು ಹಾಡುಗಳನ್ನು ಹಾಡುವ ಮೂಲಕ ನವ ಗಾಯಕರು ಗಾನ ಗಾರುಡಿಗನಿಗೆ ನೆನೆದರು.
ಮೊಹ್ಮದ್‍ರಫಿ ಹಟ್ಟಿ ಇವರ ಮಾಲೀಕತ್ವದ ಸರ್‍ಗಮ್ ಕರೋಕೆಯಲ್ಲಿ ನವ ಗಾಯಕರಾದ ಮಹ್ಮದ್ ಗುರುರಾಜ ಮುತಾಲಿಕ್, ಅಮ್ಜದ್, ಎಂ.ಖಲೀಲ್‍ಸಾಬ ಹಟ್ಟಿ, ಹಾಜಿಬಾಬಾ ಕರಡಕಲ್, ಅಹ್ಮದ್‍ಹುಸೇನ್, ರತ್ನಮ್ಮ ಹಿರೇಮಠ, ಪ್ರಮೋದ ಕುಲಕರ್ಣಿ, ಗಿರೀಶ್ ಜೋಶಿ, ಅನೀಸ್‍ಪಾಷಾ, ಪೀರಹ್ಮದ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

