ಲಿಂಗಸುಗೂರು : ಪತ್ರಿಕಾ ಭವನದಲ್ಲಿ ವಿಶ್ವಜ್ಞಾನಿ ಜಯಂತಿ ಆಚರಣೆ
ಲಿಂಗಸುಗೂರು : ಸ್ಥಳೀಯ ಪತ್ರಿಕಾ ಭವನದಲ್ಲಿ ಬುಧವಾರ ವಿಶ್ವಜ್ಞಾನಿ,ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್‍ರ 130ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ಪತ್ರಕರ್ತರ ಸಂಘದ ಅದ್ಯಕ್ಷ ಶಿವರಾಜ ಕೆಂಭಾವಿಯವರ
ನೇತೃತ್ವದಲ್ಲಿ ಜರುಗಿದ ಜಯಂತಿಯಲ್ಲಿ ಹಿರಿಯ ಪತ್ರಕರ್ತ
ಅಮರೇಶಸ್ವಾಮಿ ಬಲ್ಲಟಗಿ ಅಂಬೇಡ್ಕರ್‍ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಜಾತ್ಯಾತೀತವಾಗಿ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮತ್ತು ಶಿಕ್ಷಣದಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯವೆಂದು ಸಾರಿದ ಸಂವಿಧಾನ ಶಿಲ್ಪಿ ಹಾಕಿಕೊಟ್ಟ ಮಾರ್ಗದಲ್ಲಿ ಯುವ ಪೀಳಿಗೆ ಮುನ್ನಡೆಯುವಂತೆ ಸಂಘದ ಜಿಲ್ಲಾ ಉಪಾದ್ಯಕ್ಷ ರಾಘವೇಂದ್ರ ಗುಮಾಸ್ತೆ ಕರೆ ನೀಡಿದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರುರಾಜ
ಗೌಡೂರು, ಹಿರಿಯ ಪತ್ರಕರ್ತರಾದ ನಾಗರಾಜ ಮಸ್ಕಿ, ಮಹ್ಮದ್ ಖಾಜಾಹುಸೇನ್, ಡಾ.ಶರಣಪ್ಪ ಆನೆಹೊಸೂರು, ಶರಣಯ್ಯ ಒಡೆಯರ್,ನಾಗರಾಜ ಗೊರೆಬಾಳ, ಸಿದ್ದನಗೌಡ ಹಟ್ಟಿ, ದುರುಗಪ್ಪ ಹೊಸಮನಿ,ಹನುಮಂತ ನಾಯಕ, ರಾಘವೇಂದ್ರ ಭಜಂತ್ರಿ, ನಾಗರಾಜ ಮಡಿವಾಳರ್,
ರಾಘವೇಂದ್ರ ಯತಗಲ್, ಪಂಪಾಪತಿ, ಹನುಮಂತ ಕನ್ನಾಳ,
ಬಸಲಿಂಗಪ್ಪ ಭಜಂತ್ರಿ, ಗಂಗಾಧರ, ಶರಣಬಸವ, ಸುಭಾಸ್, ಶಿವು ಹಟ್ಟಿ,ಬಸವರಾಜ ಹೂನೂರು, ವಿರೇಶ ಅರಮನಿ, ಶಿವರಾಜ ಹೊಸಮನಿ, ಯಲ್ಲಪ್ಪ ವಂದಲಿ, ಗೌತಮ್, ಸುನಿಲ್‍ಕುಮಾರ, ಕೃಷ್ಣಾ ಪತ್ತಾರ್,ಚನ್ನಬಸವ,ಅರುಣಕುಮಾರ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

