ರಾಯಚೂರು

ಮುಕ್ತಿಧಾಮದಲ್ಲಿ ಕೋವಿಡ್ ಮೃತ ದೇಹಗಳ ಅಂತ್ಯಕ್ರಿಯೆಗೆ ವಿರೋಧ

ಲಿಂಗಸುಗೂರು : ಕೋವಿಡ್‍ನಿಂದ ಮೃತಪಟ್ಟವರನ್ನು ಸ್ಥಳೀಯ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ಮಾಡಲು ಸ್ಥಳೀಯರಿಂದ ವಿರೋಧಗಳು ವ್ಯಕ್ತವಾಗಿದ್ದು, ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರ ಬಳಿಗೆ ಬಂದ ಮುಕ್ತಿಧಾಮದ ಸುತ್ತಮುತ್ತಲ ನಿವಾಸಿಗಳು ಮೃತದೇಹಗಳನ್ನು ಸುಡಲು ಆಕ್ಷೇಪ ವ್ಯಕ್ತಪಡಿಸಿದರು.


ಕೋವಿಡ್‍ನಿಂದ ಮೃತಪಟ್ಟ ದೇಹಗಳನ್ನು ತಡರಾತ್ರಿ ಮುಕ್ತಿಧಾಮಕ್ಕೆ ತಂದು ಸುಡಲಾಗುತ್ತಿದೆ. ಜನವಸತಿ ಪ್ರದೇಶ ಹತ್ತಿರದಲ್ಲೇ ಇರುವುದರಿಂದ ಜನ ಭಯದ ವಾತಾವರಣದಲ್ಲಿ ಇದ್ದಾರೆ. ಕೋವಿಡ್ ಸೊಂಕಿನ ಬಗ್ಗೆ ಭಯಭೀತರಾಗಿದ್ದಾರೆ. ಪಿಪಿ ಕಿಟ್‍ಗಳನ್ನೂ ಹಾಕಿಕೊಂಡು ಬರುವ ಜನರೂ ಅಲ್ಲೇ ಕಿಟ್‍ಗಳನ್ನೂ ಸುಡುತ್ತಿದ್ದಾರೆ.

ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಜನವಸತಿ ಪ್ರದೇಶ ಇರುವುದರಿಂದ ಶವಗಳನ್ನು ಸುಡುವ ಕಾರ್ಯ ಮಾಡುವುದು ಸರಿಯಲ್ಲ. ಪಟ್ಟಣದ ಹೊರವಲಯದಲ್ಲಿ ಸರಕಾರಿ ಜಾಗೆಯನ್ನು ಗುರುತಿಸಿ ಅಲ್ಲಿಯೇ ಪಾಸಿಟಿವ್ ಸೊಂಕಿತ ಶವಗಳನ್ನು ಸುಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.


ಮೇಲಧಿಕಾರಿಗಳಾದ ತಹಸೀಲ್ದಾರ್, ಸಹಾಯಕ ಆಯುಕ್ತರ ಬಳಿಗೆ ಅಹವಾಲನ್ನು ಸಲ್ಲಿಸಿ, ಅವರ ನಿರ್ದೇಶನದಂತೆ ಸೂಕ್ತ ಕ್ರಮಕ್ಕೆ ಮುಂದಾಗುವುದಾಗಿ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!