ಅನುಭವಿ ಯುವ ನಾಯಕರ ಹುಡುಕಾಟದಲ್ಲಿ ಹೈಕಮಾಂಡ್..? ಲಿಂಗಸುಗೂರು ಯೋಜನಾ ಪ್ರಾಧಿಕಾರಕ್ಕೆ ಅದ್ಯಕ್ಷರಾಗುವರೇ ಸಂಜೀವಕುಮಾರ್..?
ಲಿಂಗಸುಗೂರು : ಕಳೆದ ಸುಮಾರು ಎರಡೂವರೆ ದಶಕಗಳಿಂದ ರಿಯಲ್‍ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಮಾಜಿ ಶಾಸಕ ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಂಜೀವಕುಮಾರ ಕಂದಗಲ್ ಅವರು ಲಿಂಗಸುಗೂರು ಯೋಜನಾ ಪ್ರಾಧಿಕಾರಕ್ಕೆ ಅದ್ಯಕ್ಷರಾಗಿ ಆಯ್ಕೆಯಾಗುವರೇ..? ಈ ಮೂಲಕ ಬಿಜೆಪಿ ಪಕ್ಷದಲ್ಲಿ ಲಿಂಗಾಯತ ಬಣಜಿಗ ಸಮುದಾಯಕ್ಕೆ ನ್ಯಾಯ ದೊರಕುವುದೇ..? ಎನ್ನುವ ಮಾತುಗಳೀಗ ತಾಲೂಕಿನಲ್ಲಿ ಚರ್ಚೆಗೀಡಾಗುತ್ತಿವೆ.
ಪಟ್ಟಣಕ್ಕೆ ಸರಕಾರ ಯೋಜನಾ ಪ್ರಾಧಿಕಾರ ಘೋಷಣೆ ಮಾಡಿದ ನಂತರ ಪ್ರಾಧಿಕಾರದ ಅದ್ಯಕ್ಷರಾಗಬೇಕೆನ್ನುವ ಕಸರತ್ತು ಬಿಜೆಪಿ ಪಾಳಯದಲ್ಲಿ ಜೋರಾಗಿ ನಡೆದಿದೆ. ತನ್ನದೇ ಆದ ಪ್ರತ್ಯೇಕ ಮಂಡಳಿ ಹೊಂದುವ ಯೋಜನಾ ಪ್ರಾಧಿಕಾರಕ್ಕೆ ಅದ್ಯಕ್ಷರನ್ನು ನೇಮಕ ಮಾಡುವ ಅಧಿಕಾರ ಬಿಜೆಪಿ ಸರಕಾರಕ್ಕಿದೆ. ಅಲ್ಲದೇ, ತಾಲೂಕಿನ ಬಿಜೆಪಿ ಹೈಕಮಾಂಡ್ ಆಗಿರುವ ಮಾಜಿ ಶಾಸಕ ವಜ್ಜಲ್‍ರ ಕೃಪಾಕಟಾಕ್ಷ ಯಾರ ಮೇಲಿದೆಯೋ ಅವರಿಗೇ ಆಧ್ಯತೆ ಎನ್ನುವ ಮಾತುಗಳನ್ನು ಅಲ್ಲಗಳೆಯುವಂತಿಲ್ಲ.
ಪುರಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಹಿಡಿದು ಬಿಜೆಪಿ ತಾಲೂಕಿನಲ್ಲಿ ಬಹುತೇಕ ಎಲ್ಲಾ ಸಮುದಾಯದವರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಜ್ಜಲ್‍ರು ಶ್ರಮಿಸುತ್ತಿದ್ದಾರೆ. ಸಧ್ಯಕ್ಕೆ ಬಣಜಿಗ ಸಮಾಜಕ್ಕೆ ಸ್ಥಾನಮಾನ ನೀಡಬೇಕೆನ್ನುವ ಅಬಿಲಾಶೆಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ನಿವೃತ್ತ ವೈದ್ಯಾಧಿಕಾರಿ ಡಾ.ಶಿವಬಸಪ್ಪ, ಯುವ ಮುಖಂಡ ಸಂಜೀವಕುಮಾರ ಕಂದಗಲ್, ಮಹಿಳಾ ಮೋರ್ಚಾ ಅದ್ಯಕ್ಷೆ ಜಯಶ್ರೀ ಸಕ್ರಿ ಅವರ ಹೆಸರುಗಳು ಬಣಜಿಗ ಸಮಾಜದಲ್ಲಿ ಮುಂಚೂಣಿಯಲ್ಲಿವೆ. ಈಗಾಗಲೇ ಸಂಜೀವ ಅವರ ಪರವಾಗಿ ಸಮುದಾಯದ ಕೆಲ ಮುಖಂಡರು ವಜ್ಜಲ್ ಸಾಹೇಬರ ಬಳಿ ತೆರಳಿ ಮನವಿಯನ್ನೂ ಮಾಡಿಕೊಂಡಿದ್ದಾರೆನ್ನುವ ಮಾಹಿತಿ ಇದೆ.
ತಾಲೂಕಿನಲ್ಲಿ ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬಲು ಸಧ್ಯಕ್ಕೆ ಯುವ ನಾಯಕತ್ವದ ಅಗತ್ಯತೆ ಹೆಚ್ಚಾಗಿದೆ. ಬಣಜಿಗ ಸಮುದಾಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಂಜೀವಕುಮಾರ ಈಗಾಗಲೇ ಪಕ್ಷಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇವರ ತಂದೆಯವರಾದ ಹಿರಿಯ ನ್ಯಾಯವಾದಿ ದಿ. ಪುರದಪ್ಪ ಕಂದಗಲ್‍ರ ಮಾರ್ಗದರ್ಶನದಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟಿರುವ ಸಂಜೀವ ಅವರು ಚಿಕ್ಕ ವಯಸ್ಸಿನಲ್ಲಿಯೇ ಜನಾನುರಾಗಿ ಯುವ ನಾಯಕ ಎನಿಸಿಕೊಂಡಿದ್ದಾರೆ. ಇವರ ಜೊತೆ ಮಾನಪ್ಪ ವಜ್ಜಲ್‍ರಿಗೂ ಒಡನಾಟ ಇದೆ. ಆದರೆ, ಸಮಾಜದ ಹಿರಿಯರ ಒತ್ತಾಯ ಮತ್ತು ಹೈಕಮಾಂಡ್ ನಿರ್ಧಾರ ಯಾರ ಮೇಲೆ ನಿರ್ಭರವಾಗಿದೆಯೋ ಅವರೇ ಅದ್ಯಕ್ಷರಾಗುವುದು ಖಚಿತವಾಗಿದೆ.
ಇವರಷ್ಟೇ ಅಲ್ಲದೇ, ವಿವಿಧ ಸಮಾಜದ ಮುಖಂಡರುಗಳು ಅದ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದು, ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ವಜ್ಜಲ್‍ರ ಮನವೊಲಿಸಲು ಪ್ರಯತ್ನಗಳನ್ನು ನಡೆಸಿದ್ದಾರೆನ್ನಲಾಗುತ್ತಿದೆ. ಬಿಜೆಪಿ ಹೈಕಮಾಂಡ್ ಯಾರ ಮೇಲೆ ಒಲವು ತೋರುವುದೋ? ಕಾದು ನೋಡಬೇಕಿದೆ.

