ಸೊಂಕಿತರಿಗೆ ಕ್ವಾರಂಟೈನ್ ಸೆಂಟರ್‍ನಲ್ಲಿ ಯೋಗ, ಪ್ರಾಣಾಯಾಮ
ಲಿಂಗಸುಗೂರು : ಕೋವಿಡ್ ಸೊಂಕಿತರ ಆರೋಗ್ಯ ಸದೃಢವಾಗಿರುವ ಜೊತೆಗೆ ಶೀಘ್ರ ಚೇತರಿಕೆಗೆ ಸಹಾಯವಾಗಲು ಕರಡಕಲ್ ಹೊರವಲಯದಲ್ಲಿರುವ ಕ್ವಾರಂಟೈನ್ ಸೆಂಟರ್‍ನಲ್ಲಿ ಯೋಗ ಮತ್ತು ಪ್ರಾಣಾಯಾಮದ ಅಭ್ಯಾಸ ಮಾಡಿಸಲಾಯಿತು.
ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ಡಾ.ಹೆಚ್.ಬಿ.ತಳ್ಳಳ್ಳಿ ನೇತೃತ್ವದ ತಂಡ ಕ್ವಾರಂಟೈನ್ ಸೆಂಟರ್‍ಗೆ ನಸುಕಿನಲ್ಲಿ ತೆರಳಿ ಸೊಂಕಿತರಿಗೆ ಯೋಗ ಮತ್ತು ಪ್ರಾಣಾಯಾಮ ಮಾಡಿಸಿದರು. ಸೊಂಕಿತರು ದೃತಿಗೆಡದೇ ಧೈರ್ಯವಾಗಿ ಕಾಲಕಾಲಕ್ಕೆ ವೈದ್ಯರ ಸೂಚನೆಯಂತೆ ಔಷಧ ಸೇವನೆ ಮಾಡಿಕೊಂಡು ಯೋಗ, ಪ್ರಾಣಾಯಾಮದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಬೇಕು. ಯೋಗದಿಂದ ಸದೃಢ ಆರೋಗ್ಯ ಸಾಧ್ಯವೆಂದು ವೈದ್ಯರು ಸೊಂಕಿತರಿಗೆ ಮನವರಿಕೆ ಮಾಡಿಕೊಟ್ಟರು.
ರವಿಕುಮಾರ, ಪಿ.ಕಮಲ ಸೇರಿ ಆರೋಗ್ಯ ಇಲಾಖೆ ಸಿಬ್ಬಂಧಿಗಳು ಹಾಗೂ ಸೊಂಕಿತರು ಇದ್ದರು.

