ಸರಕಾರಿ ಆಸ್ಪತ್ರೆಗೆ ವೈದ್ಯರ ನೇಮಕ ಸೇರಿ ಮೂಲ ಸೌಕರ್ಯಕ್ಕೆ ಆಗ್ರಹ
ಲಿಂಗಸೂಗೂರು : ಸ್ಥಳೀಯ ಸರಕಾರಿ ಆಸ್ಪತ್ರೆಗೆ ತಜ್ಞ ಎಂ.ಡಿ.
ವೈದ್ಯರನ್ನು ನೇಮಕಾತಿ ಮಾಡುವ ಜೊತೆಗೆ ಔಷಧ, ಸ್ವಚ್ಛತೆ ಸೇರಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡಸಿದರು.
ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಜಿಲ್ಲಾ
ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಲಿಂಗಸುಗೂರು ಸರಕಾರಿ ಆಸ್ಪತ್ರೆಗೆ ಎಂ.ಡಿ. ವೈದ್ಯರನ್ನು ನೇಮಕ ಮಾಡಬೇಕು.ಆಸ್ಪತ್ರೆಯಲ್ಲಿರುವ ಶೌಚಾಲಯಗಳು, ಕಾರಿಡಾರ್‍ಗಳು, ಒಳಾವರಣ ನಿರ್ವಹಣೆ ಇಲ್ಲದೇ ಗಬ್ಬೆದ್ದು ನಾಡುತ್ತಿದ್ದು ರೋಗಗ್ರಸ್ಥ ವಾತಾವರಣವಿದೆ. ಕೂಡಲೇ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.
ರೋಗಿಗಳಿಗೆ ಹೊರಗಡೆ ಔಷಧ ಚೀಟಿ ಬರೆಯುವುದನ್ನು ತಪ್ಪಿಸಿ,ಅಗತ್ಯ ಔಷಧಗಳನ್ನು ಸಂಗ್ರಹಿಸಿ ಸರಕಾರದ ನಿಯಮಾನುಸಾರ ಉಚಿತವಾಗಿ ಚಿಕಿತ್ಸೆ ನೀಡಬೇಕು. ಸೀಜೇರಿಯನ್ ಹೆರಿಗೆಗೆ 15 ಸಾವಿರ, ಸಾಮಾನ್ಯ
ಹೆರಿಗೆಗೆ 10 ಸಾವಿರ ರೂಪಾಯಿಗಳನ್ನು ಇಲ್ಲಿ ನಿಗದಿಪಡಿಸಲಾಗಿದೆ. ಇದರಿಂದ ಬಡ ರೋಗಿಗಳು ಹಣಕ್ಕಾಗಿ ಪರದಾಡುವಂಥಹ ಪರಿಸ್ಥಿತಿ ಇದೆ. ಸರಕಾರ ಉಚಿತ
ಸೇವೆ ಎಂದು ಹೇಳುತ್ತಿದ್ದರೂ, ಆಸ್ಪತ್ರೆಯಲ್ಲಿ ಮಾತ್ರ ಹಗಲು
ದರೋಡೆ ನಡೆಯುತ್ತಿದೆ. ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುವ ಮೂಲಕ ಬಡವರ ನೆರವಿಗೆ ಧಾವಿಸಬೇಕು. ಆಪರೇಷನ್ ಥಿಯೇಟರ್‍ನಲ್ಲಿ ಅಗತ್ಯ ಶಸ್ತ್ರ ಚಿಕಿತ್ಸಕ ಸಾಮಗ್ರಿಗಳನ್ನು ಪೂರೈಕೆ ಮಾಡಬೇಕು ಸೇರಿ ಇತರೆ
ಬೇಡಿಕೆಗಳ ಈಡೇರಿಗೆ ಒತ್ತಾಯಿಸಿದರು.
ಸರಕಾರಿ ಆಸ್ಪತ್ರ ಮುಖ್ಯ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್,ಕರವೇ ಅದ್ಯಕ್ಷ ಜಿಲಾನಿಪಾಷಾ, ಪ್ರಧಾನ ಕಾರ್ಯದರ್ಶಿ ಶಿವರಾಜ ನಾಯ್ಕ,ನಗರ ಘಟಕ ಅದ್ಯಕ್ಷ ಹನುಮಂತ ನಾಯಕ, ಉಪಾದ್ಯಕ್ಷ ಚಂದ್ರು ನಾಯಕ, ಖಜಾಂಚಿ ಅಜೀಜಪಾಷಾ, ಕಾರ್ಯಕರ್ತರಾದ ಇರ್ಫಾನ್ ಖುರೇಶಿ,ರವಿಕುಮಾರ ಬರಗೂಡಿ,ಅಜ್ಮೀರ್‍ಖಾನ್,ಮಹೆಬೂಬ, ಭಗೀರಥ ಸರ್ಜಾಪೂರ,ಅಮರೇಶ,ಮಹೆಬೂಬ,ಇಸ್ಮಾಯಿಲ್, ಸುಲೆಮಾನ್, ಶಂಕ್ರಪ್ಪ, ಬಸವರಾಜ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

