ಹಿಂದುತ್ವ ರಕ್ಷಣೆ ಜೊತೆಗೆ ಅನ್ಯರೊಂದಿಗೆ ಸೌಹಾರ್ದತೆ ಕಾಪಾಡಲು ಕರೆ
ಲಿಂಗಸೂಗೂರು : ಹಿಂದುತ್ವ ರಕ್ಷಣೆ ಮಾಡುವ ಜೊತೆಗೆ ಅನ್ಯ
ಸಮುದಾಯದ ಬಾಂಧವರೊಂದಿಗೆ ಸೌಹಾರ್ದತೆಯಿಂದ ಇರಬೇಕೆಂದು ಹಿಂದು ಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ವಿನಯಗೌಡ ಕರೆ ನೀಡಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಹಿಂದು ಜಾಗೃತಿ ಸೇನೆಯ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಗಳು ಸಮಾಜದಲ್ಲಿನ ಬಡವರಿಗೆ ಶಿಕ್ಷಣ, ಸಾಮಾಜಿಕ ಬೆಳವಣಿಗೆಗೆ ಸಹಾಯ,ಸಹಕಾರ ನೀಡಬೇಕು. ಹಿಂದುತ್ವ ರಾಷ್ಟ್ರದಲ್ಲಿ ಹಿಂದುಗಳ ರಕ್ಷಣೆ ಜೊತೆಗೆ ಬೇರೆಯವರ ಜೊತೆ ಸ್ನೇಹ, ಸೌಹಾರ್ದತೆಯನ್ನು
ಹೊಂದಿರಬೇಕು ಎಂದು ಹೇಳುತ್ತಾ, ಶೀಘ್ರದಲ್ಲಿ ಹಿಂದು ಜಾಗೃತಿ ಸೇನೆಯ ಕಚೇರಿಯನ್ನು ತಾಲೂಕು ಕೇಂದ್ರದಲ್ಲಿ
ಆರಂಭಿಸಲಾಗುವುದೆಂದರು.
ಸೇನೆಯ ಜಿಲ್ಲಾದ್ಯಕ್ಷ ಲಕ್ಷ್ಮಿಕಾಂತ ಸೌದಿ, ಈಶ್ವರ ವಜ್ಜಲ್, ಕೃಷ್ಣಾ ಎಸ್.ಬಾಗಲಕೋಟ,ಗಿರಿಮಲ್ಲನಗೌಡ,ತಾಲೂಕಾದ್ಯಕ್ಷ ವಿರೇಶ, ನಾಗರಾಜ,ಮಣಿಕಂಠ ಸಜ್ಜನ್, ಶಶಿಕುಮಾರ ಸೇರಿ ಇತರರು ಕಾರ್ಯಕ್ರಮದಲ್ಲಿ ಇದ್ದರು.

