ಈ-ಸರ್ವೆ ಕೈಬಿಡಿ, ಚುನಾವಣೆ ಭತ್ಯೆ ನೀಡಿ : ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಲಿಂಗಸುಗೂರು : ಆಶಾ ಕಾರ್ಯಕರ್ತೆಯರಿಗೆ ಈ ಸರ್ವೆ ಕೆಲಸದಲ್ಲಿ ಕೈಬಿಡಬೇಕು. ಈಗಾಗಲೇ ಮುಗಿದ ಪಂಚಾಯತ್ ಚುನವಣೆಯಲ್ಲಿ ದುಡಿದ ಆಶಾಗಳಿಗೆ ಭತ್ಯೆ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್‍ರಿಗೆ ಮನವಿ ಸಲ್ಲಿಸಿದ ಆಶಾಕಾರ್ಯಕರ್ತೆಯರು, ಸಮಸ್ಯೆಗಳಿಗೆ ಸ್ಪಂಧಿಸುವಂತೆ ಒತ್ತಾಯಿಸಿದರು.
ಮನವಿಗೆ ಸ್ಪಂಧಿಸಿ ವೈದ್ಯಾಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು.
ಸರಕಾರದ ಮಟ್ಟದಲ್ಲಿ ಇರುವ ಸಮಸ್ಯೆಗಳ ಪರಿಹಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘಟನೆ ತಾಲೂಕು ಗೌರವಾದ್ಯಕ್ಷ ಶರಣಪ್ಪ ಉದ್ಬಾಳ, ಎಐಟಿಯುಸಿ
ಜಿಲ್ಲಾ ಉಪಾದ್ಯಕ್ಷ ಶಿವರಾಜ್ ಮಾಳಪೂರ, ತಿರುಪತಿ, ಬಾಲಾಜಿ, ಆಶಾ ತಾಲೂಕು
ಅದ್ಯಕ್ಷೆ ನಗುಮಿ, ದೇವಮ್ಮ, ನಾಗಮ್ಮ, ಈರಮ್ಮ, ಬಸಮ್ಮ, ಗಂಗಮ್ಮ,
ಕಲ್ಪನಾ, ಶೈಲಜಾ, ಪದ್ಮ ಸೇರಿ ಇತರರು ಇದ್ದರು.

