ರಾಯಚೂರು

ರಾಮ ಮಂದಿರ ನಿರ್ಮಾಣ : ನಿಧಿ ಸಂಗ್ರಹ-ಸಮರ್ಪಣಾ ಕಾರ್ಯ

ಲಿಂಗಸುಗೂರು : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಸಾರ್ವಜನಿಕರಿಂದ ನಿಧಿ ಸಂಗ್ರಹ ಹಾಗೂ ಸಮರ್ಪಣಾ ಕಾರ್ಯಕ್ಕೆ ಬಿಜೆಪಿ ಅದ್ಯಕ್ಷ ವೀರನಗೌಡರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.


ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ನಿಧಿ ಸಂಗ್ರಹ ಹಾಗೂ ಸಮರ್ಪಣಾ ಕಾರ್ಯ ನಡೆಯಿತು. ಶ್ರೀರಾಮ ಮಂದಿರದ ಒಟ್ಟು ವಿಸ್ತೀರ್ಣ 2.7 ಎಕರೆ, ಒಟ್ಟು ನಿರ್ಮಾಣ ವಿಸ್ತೀರ್ಣ 57,400 ಚದರ ಅಡಿ, 360 ಅಡಿ ಉದ್ದ, 235 ಅಡಿ ಅಗಲ, 161 ಅಡಿ ಎತ್ತರ, 5 ಮಂಟಪಗಳು ಸೇರಿ ಒಟ್ಟು ಮೂರು ಅಂತಸ್ಥಿನ ಮಂದಿರ ಇದಾಗಲಿದ್ದು, ಪ್ರತಿ ಅಂತಸ್ಥೂ 20 ಅಡಿಗಳಷ್ಟು ಎತ್ತರದಲ್ಲಿರಲಿದೆ. ದೇಣಿಗೆ ನೀಡಬಯಸುವವರು ನೀಡಬಹುದು ಒತ್ತಾಯ-ಕಡ್ಡಾಯ ಯಾವುದೂ ಇಲ್ಲ ಎಂದು ಮನೆಮನೆಗೆ ತೆರಳಿ ಕಾರ್ಯಕರ್ತರು ಅಭಿಯಾನ ನಡೆಸಿದರು.


ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಶ್ವೇತಾ ಲಾಲಗುಂದಿ, ಶಿವಪ್ರಕಾಶ, ವಸಂತ ಜೋಶಿ, ಚಂಧನ, ಅಯ್ಯಪ್ಪ, ನಾಗರಾಜ, ಹನುಮಂತ, ಮೌನೇಶ ಸೇರಿ ಇತರರು ಅಭಿಯಾನದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!