ಕೋವಿಡ್ ಲಸಿಕೆ ಉಚಿತವಾಗಿ ಹಾಕಲು ಎಸ್‍ಎಫ್‍ಐ ಆಗ್ರಹ
ಲಿಂಗಸುಗೂರು : ಹಿರಿಯರು, ಮಧ್ಯಮ ವಯಸ್ಕರು, ಯುವಕರು,ಕಿರಿಯರು ಎನ್ನದೇ ಸರ್ವರಿಗೂ ಕೋವಿಡ್ ಲಸಿಕೆ ಹಾಕಬೇಕೆಂದು ಎಸ್‍ಎಫ್‍ಐ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.
ತಾಲೂಕಿನ ವೀರಾಪೂರ ಗ್ರಾಮದ ಎಸ್‍ಎಫ್‍ಐ ಕಚೇರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ಮಾಡಿದ ಅವರು, ಕೋವಿಡ್ ಸೋಂಕಿತರಿಗೆ ರಾಜ್ಯ ಸರಕಾರ ಉಚಿತವಾಗಿ ಚಿಕಿತ್ಸೆ ನೀಡಬೇಕು. ಕೋವಿಡ್
ಸೋಂಕಿತರಿಗೆ ರಾಜ್ಯ ಸರಕಾರ ಉಚಿತವಾಗಿ ಆಹಾರ ಮತ್ತು ಔಷಧಗಳನ್ನು ಪೂರೈಕೆ ಮಾಡಬೇಕು. ಸೋಂಕಿತರ ಆರೋಗ್ಯ ಸಂರಕ್ಷಣೆ ಹಿತದೃಷ್ಠಿಯಿಂದ ತ್ವರಿತವಾಗಿ ಆಸ್ಪತ್ರೆಗಳ ಹಾಗೂ ಆಂಬ್ಯುಲೆನ್ಸ್‍ಗಳ ಸೇವೆ ಒದಗಿಸಬೇಕು. ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಗಳನ್ನು ಬಲಪಡಿಸಬೇಕು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಹಾಗೂ ಗ್ರಾ.ಪಂ. ಸದಸ್ಯ ರಮೇಶ
ವೀರಾಪೂರ, ತಾಲೂಕು ಉಪಾದ್ಯಕ್ಷ ನಾಗರಾಜ ನಿಲೋಗಲ್, ಅಮರೇಗೌಡ,ಚೆನ್ನಬಸವ, ಅಮರೇಶ, ಸುರೇಶ ಯಲಬುರ್ಗ, ಅಮರೇಗೌಡ,ವೆಂಕಟೇಶ ಸೇರಿ ಇತರರು ಇದ್ದರು.

