ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಸಿಂಧನೂರು ವಿಭಾಗದ ಅಧ್ಯಕ್ಷರಾಗಿ ವಾದಿರಾಜ ಕುಲಕರ್ಣಿ ಅವಿರೋಧ ಆಯ್ಕೆ
ಸಿಂಧನೂರ: ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಕೆ.ನಾಗಲಿಂಗಸ್ವಾಮಿ ನೇತೃತ್ವದಲ್ಲಿ ಇಂದು ಸಿಂಧನೂರು ವಿಭಾಗದ ಮಟ್ಟದ ಪದಾಧಿಕಾರಿಗಳ ಅಯ್ಕೆ ಸಭೆಯು ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಒಗ್ಗಟ್ಟು ಬಹುಮುಖ್ಯವಾಗಿದೆ. ಕಾರ್ಮಿಕರ ಐಕ್ಯತೆಯೊಂದಿಗೆ ಮುಂದುವರೆಯೋಣ ಎಂದು ಕರೆ ನೀಡಿದರು.

ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಸಿಂಧನೂರು ವಿಭಾಗದ ಅಧ್ಯಕ್ಷರಾಗಿ ವಾದಿರಾಜ ಕುಲಕರ್ಣಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಲಿಂಗನಗೌಡ ಮಸ್ಕಿ, ಉಪಾಧ್ಯಕ್ಷರಾಗಿ ರಾಮಣ್ಣ ನಾಯಕ ತುರುವಿಹಾಳ ಆಯ್ಕೆಯಾದರು.
ಈ ಸಭೆಯಲ್ಲಿ ಸಂಘದ ಕೇಂದ್ರ ಸಮಿತಿಯ ಕಾರ್ಯದರ್ಶಿ ಬಸವರಾಜ ಮರಕಮದಿನ್ನಿ, ಪುರುಷೋತ್ತಮ, ಮಹ್ಮದ್ ರಫಿ, ರಾಜಮಹ್ಮದ್, ಜಲಾಲಪಾಷ, ಕುಮಾರ್ ಪವಾಡಶೆಟ್ಟಿ, ಮಹ್ಮದ್ ಸಾಬ್ ಮಸ್ಕಿ, ಲಿಂಗಪ್ಪ ಬೇರ್ಗಿ, ಆದಪ್ಪ, ವೀರೇಶ ಜವಳಗೇರಾ, ಶರಣಪ್ಪ ಉದ್ಬಾಳ್, ಬಸಪ್ಪ ಬೆಂಚಮರಡಿ, ಬೆಟ್ಟಪ್ಪ ಜವಳಗೇರಾ, ಚಾಂದಪಾಷ, ವೆಂಕಟೇಶ ಜವಳಗೇರಾ ಸೇರಿದಂತೆ ಸಿಂಧನೂರು, ಜವಳಗೇರಾ, ಮಸ್ಕಿ, ತುರುವಿಹಾಳ್ ಉಪವಿಭಾಗದ ನೂರಾರು ಕಾರ್ಮಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಎಂ.ಬಸವರಾಜ
ಪ್ರಧಾನ ಕಾರ್ಯದರ್ಶಿ
ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘ ಕೇಂದ್ರ ಸಮಿತಿ.

