ತಹಸೀಲ್ದಾರ್ ಚಾಮರಾಜ ಪಾಟೀಲ್ ವಯೋನಿವೃತ್ತಿ : ಬೀಳ್ಕೊಡುಗೆ
ಲಿಂಗಸುಗೂರು : ತಹಶೀಲ್ದಾರ ಚಾಮರಾಜ ಪಾಟೀಲ್‍ರು ವಯೋನಿವೃತ್ತಿಯಾದ ಪರಿಣಾಮ ತಾಲೂಕು ಆಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಸ್ಥಳೀಯ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದ ಅದ್ಯಕ್ಷತೆಯನ್ನು ಸಹಾಯಕ ಆಯುಕ್ತ ರಾಹುಲ್ ಸಂಕನೂರು ವಹಿಸಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಚಾಮರಾಜ ಪಾಟೀಲ್ ಅಧಿಕಾರದ ಅವಧಿಯಲ್ಲಿ ನಾನು ಸಲ್ಲಿಸಿದ ಸೇವೆ ನನಗೆ ತೃಪ್ತಿ ತಂದಿದೆ. ತಮ್ಮ ಈ ಆತ್ಮೀಯ ಸನ್ಮಾನಕ್ಕೆ ನಾನು ಚಿರಋಣಿಯಾಗಿರುತ್ತೇನೆಂದು ಭಾವುಕರಾದರು.
ಡಿವೈಎಸ್‍ಪಿ ಎಸ್.ಎಸ್. ಹುಲ್ಲೂರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ, ಸಿಡಿಪಿಒ ಶರಣಮ್ಮ ಕಾರನೂರು, ಭೀಮಣ್ಣನಾಯಕ, ಶಿವಾನಂದ ನರಹಟ್ಟಿ ಸೇರಿ ಇತರರು ಇದ್ದರು.

