ಕರ್ನಾಟಕ ಬಂದ್‍ಗೆ ಕನ್ನಡಪರ ಸಂಘಟನೆಗಳ ಬೆಂಬಲ : ಬಂಧನ-ಬಿಡುಗಡೆ
ಲಿಂಗಸುಗೂರು : ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸರಕಾರದ ಕ್ರಮವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಬಂದ್‍ಗೆ ಕರೆ ನೀಡಿದ್ದ ಪ್ರಯುಕ್ತ ಪಟ್ಟಣದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿ-ಬಿಡುಗಡೆ ಮಾಡಲಾಯಿತು.
ಕನ್ನಡ ನಾಡು ಜಾತ್ಯಾತೀತ ಬೀಡು. ಕನ್ನಡ ನಾಡಿನಲ್ಲಿ ದೇಶದ ಎಲ್ಲಾ ರಾಜ್ಯಗಳ ನಾಗರಿಕರೂ ವಾಸವಾಗಿದ್ದಾರೆ. ಕನ್ನಡಿಗರು ಹೃದಯ ವೈಶಾಲ್ಯ ಉಳ್ಳವರು. ಆದರೆ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಕ್ರಮ ಮಾತ್ರ ಖಂಡನೀಯ. ಓಲೈಕೆ ರಾಜಕಾರಣ ಮಾಡುವ ನಿಟ್ಟಿನಲ್ಲಿ ಕನ್ನಡಿಗರಿ ಅವಮಾನ ಮಾಡಲು ಹೊರಟಿರುವ ಸರಕಾರದ ಕ್ರಮ ಅಸಂವಿಧಾನಿಕವಾದದ್ದು.
ಬೆಳಗಾವಿ ಗಡಿ ಭಾಗದಲ್ಲಿ ಮಹಾರಾಷ್ಟ್ರ ರಾಜ್ಯದ ಕೆಲ ಪುಡಾರಿಗಳು ಮರಾಠಿ ಭಾಷೆಯ ಮತ್ತು ಕನ್ನಡಿಗರಿಗೆ ಅವಮಾನ ಮಾಡುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಪುಂಡರನ್ನು ಹತ್ತಿಕ್ಕುವ ಬದಲು ರಾಜ್ಯ ಸರಕಾರ ಅವರಿಗೆ ಮರಾಠ ಅಭಿವೃದ್ಧಿ ನಿಗಮ ಆರಂಭಕ್ಕೆ ಆದೇಶ ನೀಡುವ ಮೂಲಕ ಮರಾಠಿಗರ ಬೆಂಬಲಕ್ಕೆ ನಿಂತಿದೆ. ಕೇವಲ ಚುನಾವಣೆ ಗಿಮಿಕ್‍ಗಾಗಿ 50 ಕೋಟಿ ರೂಪಾಯಿ ಅನುದಾನವನ್ನೂ ನಿಗಮ, ಪ್ರಾಧಿಕಾರಕ್ಕೆ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಸೂಚನೆ ನೀಡಿರುವುದು ಅಕ್ಷಮ್ಯವಾಗಿದೆ.
ಈ ಕಾರ್ಯಕ್ಕೆ ಕೆಲ ನೀತಿಗೆಟ್ಟ ಶಾಸಕರು ಕನ್ನಡದ್ರೋಹಿ ಹೇಳಿಕೆಗಳನ್ನು ನೀಡುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುಕತ್ತಿರುವುದು ಮಾತ್ರ ಅಸಹನೀಯವಾಗಿದೆ. ಕೂಡಲೇ ರಾಜ್ಯ ಸರಕಾರ ಕೈಗೊಂಡಿರುವ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಷಯವನ್ನು ಕೈಬಿಡಬೇಕು. ನಾಡದ್ರೋಹಿ ಹೇಳಿಕೆ ನೀಡುತ್ತಿರುವ ಶಾಸಕರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷ ಜಿಲಾನಿಪಾಷಾ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು, ಜಯಕರ್ನಾಟಕ ಸಂಘಟನೆ ಅದ್ಯಕ್ಷ ಬಾಲನಗೌಡ ಸೇರಿ ನಾನಾ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


