” ಡಿಸೆಂಬರ್ 8 ಭಾರತ್ ಬಂದ್”FITU ಬೆಂಬಲ
ಬೆಂಗಳೂರು:ಡಿಸೆಂಬರ್ 7, ಡಿಸೆಂಬರ್ 8 ಮಂಗಳವಾರರಂದು ರೈತರಿಗೆ ಬೆಂಬಲವಾಗಿ ನಡೆಯುತ್ತಿರುವ “ಭಾರತ್ ಬಂದ್” ಗೆ ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (FITU) ಸಂಪೂರ್ಣ ಬೆಂಬಲ ನೀಡಲಿದೆ ಎಂದು FITU ರಾಜ್ಯಾದ್ಯಕ್ಷರಾದ ಸುಲೈಮಾನ್ ಕಲ್ಲರ್ಪೆ ಎಂದು ತಿಳಿಸಿದ್ದಾರೆ. ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡುವ ಕೇಂದ್ರ ಸರಕಾರದ ರೈತ ವಿರೋಧಿ ಕಾನೂನನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಆದ್ದರಿಂದ ನಮಗೆ ಅಂಬಾನಿ ಅದಾನಿಗಿಂತಲೂ ಮುಖ್ಯ ಅನ್ನದಾತ ರೈತರಾಗಿದ್ದಾರೆ.ರೈತರಿದ್ದರೆ ಮಾತ್ರ ಬದುಕಬಹುದು. ಆದ್ದರಿಂದ ರೈತರನ್ನು ನಾಶ ಮಾಡುವ ಮೂರು ಮುಖ್ಯ ಕಾಯಿದೆಗಳನ್ನು ತಕ್ಷಣ ಕೇಂದ್ರ ಸರಕಾರ ಹಿಂಪಡೆಯಬೇಕೆಂದು ಅವರು ಆಗ್ರಹಿಸಿದರು.

