ಲಸಿಕೆಗೆ ಶೀತಲ ಗೃಹ ನಿರ್ಮಾಣ: ಲಕ್ಸಂಬರ್ಗ್ ಸಂಸ್ಥೆಯ ಜತೆ ಮಾತುಕತೆ
ನವದೆಹಲಿ: ಡಿಸೆಂಬರ್ 04. ಭಾರತಕ್ಕೆ ಶೀಘ್ರ ಕೊರೊನಾ ಲಸಿಕೆ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಗಳ ಶೇಖರಣೆಗೆ ಶೀತಲ ಗೃಹ ನಿರ್ಮಾಣವೂ ಮುಖ್ಯವಾಗಿದೆ.ಈ ಕುರಿತು ಭಾರತವು ಲಕ್ಸಂಬರ್ಗ್‌ನ ಸಂಸ್ಥೆಯ ಜತೆ ಮಾತುಕತೆ ನಡೆಸುತ್ತಿದ್ದು, ಈ ವಾರಾಂತ್ಯ ಲಕ್ಸ್ಂಬರ್ಗ್ ನ ಬಿ ಮೆಡಿಕಲ್ ಸಿಸ್ಟಂನ ಇಬ್ಬರು ಅಧಿಕಾರಿಗಳು ದೆಹಲಿಗೆ ಭೇಟಿ ನೀಡಲಿದ್ದಾರೆ. ಅವರು ಹಿರಿಯ ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳ ಜತೆ ಮಾತುಕತೆ ನಡೆಸಲಿದ್ದಾರೆ. ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗಿಂತ ಅದರ ಶೇಖರಣೆಯೇ ತಲೆನೋವು ತರುವಂತಹ ವಿಚಾರವಾಗಿದೆ. ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕಾಗುತ್ತದೆ. ಮಾಡೆರ್ನಾ ಲಸಿಕೆಯನ್ನು ಮೈನಸ್ 20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕು.
ಬಳಿಕ ಪೊಲೀಸರು, ಶಿಕ್ಷಕರಿಗೆ ಹಂತ ಹಂತವಾಗಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸರ್ವ ಪಕ್ಷ ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ಎಲ್ಲಾ ರಾಜ್ಯಗಳ ಕೊರೊನಾ ಪರಿಸ್ಥಿತಿ ಕುರಿತಂತೆ ಹಾಗೂ ಕೊರೊನಾ ಲಸಿಕೆ ಕುರಿತು ಮಾತುಕತೆ ನಡೆಸಿದ್ದಾರೆ. ಕೊರೊನಾವೈರಸ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸರ್ವಪಕ್ಷದ ನಾಯಕರು ತಮ್ಮ ಸಲಹೆ ಸೂಚನೆಗಳನ್ನು ಬರಹದ ರೂಪದಲ್ಲಿ ನೀಡಬೇಕು. ಎಲ್ಲರ ಸಲಹೆಗಳನ್ನು ಪರಿಗಣಿಸಲಾಗುತ್ತದೆ. ಎಲ್ಲ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಮನವಿ ಮಾಡಿದ್ದಾರೆ.

