ಕೋಳಿ ಪಂದ್ಯ : ಐವರ ಬಂಧನ
ಲಿಂಗಸುಗೂರು : ತಾಲೂಕಿನ ರಾಂಪುರ ಗ್ರಾಮದ ಬಳಿ ಕೋಳಿ ಪಂದ್ಯದಲ್ಲಿ ತೊಡಗಿದ್ದ ಐವರನ್ನು ಪೋಲಿಸರು ಬಂಧಿಸಿ, 1,360 ರೂಪಾಯಿ ನಗದು, 600 ರೂಪಾಯಿ ಬೆಲೆ ಬಾಳುವ ಎರಡು ಹುಂಜಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು, ಸಿಪಿಐ ಮಹಾಂತೇಶ ಸಜ್ಜನ್‍ರ ಮಾರ್ಗದರ್ಶನದಲ್ಲಿ ಫೀಲ್ಡಿಗಿಳಿದ ಪಿಎಸ್‍ಐ ಪ್ರಕಾಶರೆಡ್ಡಿ ತಂಡವು ಕೋಳಿ ಪಂದ್ಯಾಟ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ, ಹನುಮಂತ, ಜಾವೀದ್, ಅಮರೇಶ, ಗೋವಿಂದಪ್ಪ, ಬಸವರಾಜ ಎನ್ನುವವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

