ರಾಯಚೂರು

ಲಿಂಗಸುಗೂರು : ವಿವಿದೆಡೆ ಮಹಾಯೋಗಿ ವೇಮನ ಜಯಂತಿ ಆಚರಣೆ

ಲಿಂಗಸುಗೂರು : ಪಟ್ಟಣದ ವಿವಿದೆಡೆಗಳಲ್ಲಿ ಮಹಾಯೋಗಿ ವೇಮನರ ಜಯಂತಿಯನ್ನು ಆಚರಣೆ ಮಾಡಲಾಯಿತು.
ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಸರಕಾರದ ವತಿಯಿಂದ ಆಯೋಜಿಸಿದ್ದ ಜಯಂತಿಯಲ್ಲಿ ತಹಸೀಲ್ದಾರ್ ಚಾಮರಾಜ ಪಾಟೀಲ್ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.


ಬಳಿಕ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಶರಣಪ್ಪ ಮೇಟಿ,
ಸಮಾಜದಲ್ಲಿ ಬೇರೂರಿದ್ದ ಜಾತೀಯತೆ, ಮೇಲು-ಕೀಳೆಂಬ ಭಾವನೆ ತೊಡೆದು ಹಾಕುವಂತಹ ಪದ್ಯಗಳನ್ನು ರಚಿಸಿದ ಮಹಾಯೋಗಿ ವೇಮನರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.
ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ವೆಂಕನಗೌಡ ಐದನಾಳ, ಶಿವರಡ್ಡಿ ಪೊಲೀಸ್ ಪಾಟೀಲ್, ಶರಣಗೌಡ ಪಾಟೀಲ್, ಚನ್ನಬಸವ ವಿಟ್ಲಾಪುರ, ಮಹಾಂತಗೌಡ ಪಾಟೀಲ್, ಕುಮಾರೆಪ್ಪ, ಶಿವರಾಜ ಬಾಳೇಗೌಡ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.


ಬಿಜೆಪಿ ಕಚೇರಿಯಲ್ಲಿ ಆಚರಣೆ
ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಯುವ ಮೋರ್ಚಾದ ಅದ್ಯಕ್ಷ ಈಶ್ವರ ವಜ್ಜಲ್ ಅವರು ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಿದರು.
ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಜಗನ್ನಾಥ ಕುಲಕರ್ಣಿ, ವೆಂಕನಗೌಡ ಐದನಾಳ, ಪರಮೇಶ ಯಾದವ್, ಚನ್ನಬಸವ ಹಿರೇಮಠ, ಬಸವರಾಜ ಗುತ್ತೇದಾರ, ಶ್ವೇತಾ ಲಾಲಗುಂದಿ, ಜ್ಯೋತಿ ಸುಂಕದ್, ಸ್ಮೀತಾ, ಅಮರೇಶ ಮಡ್ಡಿ, ರಮೇಶ ಕಟ್ಟಿಮನಿ ಸೇರಿ ಇತರರು ಇದ್ದರು.


ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ಆಚರಣೆ
ಶ್ರೀಶೈಲ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ಮಹಾಯೋಗಿ ವೇಮನರ 609ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ದೇವರೆಡ್ಡಿ ಮೇಟಿ, ಪುರಸಭೆ ಸದಸ್ಯ ಮುತ್ತಣ್ಣ ಮೇಟಿ, ಕಾಲೇಜು ಪ್ರಾಚಾರ್ಯ ರಾಜು ಅಂಗಡಿ, ಪಿಬಿಎ ಪ್ರಾಚಾರ್ಯ ಪ್ರಕಾಶ ಆರೋನ, ಬಿಇಡಿ ಪ್ರಾಚಾರ್ಯ ಚನ್ನಬಸಪ್ಪ ಮೇಟಿ, ಶಿಕ್ಷಕರಾದ ಬಸವರಾಜ ಸ್ವಾಮಿ, ಮೋಹನಕುಮಾರ, ಸಿಬ್ಬಂಧಿಗಳಾದ ರಾಜು ಪೌಲ್, ಶಿವಪ್ಪ, ಸುನೀಲ, ಶರಬಣ್ಣ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!