ಹುತಾತ್ಮರ ಸ್ಮರಣೆ : ಪುರಸಭೆಯಲ್ಲಿ ಮೌನಾಚರಣೆ
ಲಿಂಗಸುಗೂರು : ದೇಶದ ಸ್ವತಂತ್ರ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದರ ಸ್ಮರಣಾರ್ಥ ಜ.30ರಂದು ಸರಕಾರಿ ಕಚೇರಿಗಳಲ್ಲಿ ಮೌನಾಚರಣೆ ಮಾಡಬೇಕೆನ್ನುವ ಸರಕಾರದ ಅಧೀನ ಕಾರ್ಯದರ್ಶಿ ವಿ.ಅಕ್ಕಮಹಾದೇವಿಯರ ಅಧಿಕೃತ ಜ್ಞಾಪನದ ಹಿನ್ನೆಲೆಯಲ್ಲಿ ಪುರಸಭೆ ಕಚೇರಿಯಲ್ಲಿ ಮೌನಾಚರಣೆ ಮಾಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮಿದೇವಿ, ಸಿಬ್ಬಂಧಿಗಳಾದ ಶಿವಲಿಂಗ ಮೇಗಳಮನಿ, ರಾಘವೇಂದ್ರ, ಶಾನವಾಜ್, ಆಸ್ಮಾಬೇಗಂ, ಗಿರಿಜಾ, ಪುರಸಭೆ ಸದಸ್ಯರಾದ ಯಮನಪ್ಪ ದೇಗಮಡಿ, ಮೌಲಾಸಾಬ ಗೌಳಿ, ಮುಖಂಡರಾದ ಮಹ್ಮದ್ ಜಹೀರುದ್ಧೀನ್, ಪರಶುರಾಮ ಕೆಂಭಾವಿ, ಎಂ.ಜಿಲಾನಿ ಸೇರಿ ಇತರರು ಇದ್ದರು.

