ಸಮರ್ಪಕ ಕುಡಿವ ನೀರು ಪೂರೈಕೆಗೆ ಶಾಸಕರ ತಾಕೀತು
ಲಿಂಗಸುಗೂರು : ಲಿಂಗಸುಗೂರು, ಕರಡಕಲ್, ಹುಲಿಗುಡ್ಡ, ಕಸಬಾಲಿಂಗಸುಗೂರು ಸೇರಿ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಿಗೆ ನಿಯಮಿತವಾಗಿ ಯಾವುದೇ ದೂರುಗಳು ಬಾರದಂತೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿ ನರಸಪ್ಪ ತಶೀಲ್ದಾರ್‍ರಿಗೆ ತಾಕೀತು ಮಾಡಿದರು.
ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ವಿಶೇಷ ಸಭೆ ನಡೆಸಿದ ಶಾಸಕರು, ಪುರಸಭೆ ವ್ಯಾಪ್ತಿಯ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ವಿವಿಧ ವಾರ್ಡ್‍ಗಳಲ್ಲಿ ಸ್ವಚ್ಛತೆ ಮಾಯವಾಗಿದೆ ಎನ್ನುವ ಹಲವು ದೂರುಗಳು ಬಂದಿವೆ. ಕೂಡಲೇ ಮುಖ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು.
ಸಿಬ್ಬಂಧಿಗಳೂ ಸದಸ್ಯರ ಸಮಸ್ಯೆಗಳಿಗೆ ಕೂಡಲೇ ಸ್ಪಂಧಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಪುರಸಭೆ ಅದ್ಯಕ್ಷೆ ಗದ್ದಮ್ಮಾ ಭೋವಿ, ಉಪಾದ್ಯಕ್ಷ ಮೊಹ್ಮದ್ ರಫಿ ಸೇರಿ ಸದಸ್ಯರು ಹಾಗೂ ಪುರಸಭೆ ಸಿಬ್ಬಂಧಿಗಳು ಈ ಸಂದರ್ಭದಲ್ಲಿ ಇದ್ದರು.

