ಬಲದಂಡೆ ಕಾಲುವೆಗೆ ಏ.20ರ ವರೆಗೆ ನೀರು ಹರಿಸಲು ಆಗ್ರಹ
ಲಿಂಗಸುಗೂರು : ನಾರಾಯಣಪುರ ಬಲದಂಡೆ ಕಾಲುವೆಗೆ ಏಪ್ರಿಲ್ 20ರ ವರೆಗೆ ನೀರು ಹರಿಸುವಂತೆ ನೀರಾವರಿ ಅಧಿಕಾರಿಗಳಿಗೆ ಒತ್ತಡ ಹಾಕುವ ಮೂಲಕ ರೈತರ ಬೆಳೆಗಳನ್ನು ಕಾಪಾಡಬೇಕೆಂದು ಕಾಳಾಪೂರ ಹಾಗೂ ಗೊರೆಬಾಲ ಗ್ರಾಮ ಪಂಚಾಯಿತಿ ಮುಖಂಡರುಗಳು ಆಗ್ರಹಿಸಿದರು.
ಶಾಸಕ ಡಿ.ಎಸ್.ಹೂಲಗೇರಿಯವರಿಗೆ ಮನವಿ ಸಲ್ಲಿಸಿದ ಅವರು, ಈಗಾಗಲೇ ಮಾರ್ಚ್ 31ರ ವರೆಗೆ ನೀರು ಹರಿಸಲು ದಿನ ನಿಗದಿಯಗಿದ್ದು, ಕಾಳಾಪೂರ ಹಾಗೂ ಗೊರೆಬಾಳ ಪಂಚಾಯತ್ ವ್ಯಾಪ್ತಿಯಲ್ಲಿನ ನೂರಾರು ಹೆಕ್ಟೇರ್
ಭೂಮಿಯಲ್ಲಿ ಬೆಳೆದಿರುವ ಭತ್ತದ ಪೈರು ಕಾಳು ಕಟ್ಟುವ ಹಂತದಲ್ಲಿದೆ.ಏಪ್ರಿಲ್ 20ರ ವರೆಗೆ ನೀರು ಹರಿಸಿದಲ್ಲಿ ರೈತರ ಕೈಗೆ ಫಸಲು ಬರುತ್ತದೆ.ಇಲ್ಲವಾದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ. ಕೂಡಲೇ ಈ ಬಗ್ಗೆ ಸರಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ
ಮೂಲಕ ರೈತರ ಹಿತ ಕಾಪಾಡಬೇಕೆಂದು ಒತ್ತಾಯಿದರು.
ಕಾಳಾಪೂರ ಗ್ರಾ.ಪಂ. ಅದ್ಯಕ್ಷ ವಿಜಯಕುಮಾರ ಹೊಸಗೌಡ್ರು,ಮುಖಂಡರಾದ ಅಮರೇಶ ನಾಡಗೌಡ, ಜಿ.ಪಂ. ಸದಸ್ಯ ಬಸನಗೌಡ ಕಂಬಳಿ ಸೇರಿ ಇತರರು ಇದ್ದರು.

