ಗುರುಗುಂಟದಲ್ಲಿ ಮಹಿಳಾ ದಿನಾಚರಣೆ, ಉಚಿತ ಆರೋಗ್ಯ ತಪಾಸಣೆ ಸಮಾಜ ಮುನ್ನಡೆಸುವ ಜವಾಬ್ದಾರಿಯೂ ಮಹಿಳೆಯರ ಮೇಲಿದೆ : ಸಕ್ರಿ
ಲಿಂಗಸುಗೂರು : ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯು ಕೇವಲ ಸಂಸಾರ ನಡೆಸುವುದಲ್ಲದೇ, ಸಮಾಜವನ್ನೂ ಮುನ್ನಡೆಸಲು ಸಮರ್ಥವಾಗಿದ್ದಾಳೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಗಿಸುವ ಜೊತೆಗೆ ಆರೋಗ್ಯವನ್ನೂ
ಸದೃಢವಾಗಿ ಇಟ್ಟುಕೊಳ್ಳಬೇಕೆಂದು ಬಿಜೆಪಿ ಮಹಿಳಾ ಮೋರ್ಚಾದ ಅದ್ಯಕ್ಷೆ ಜಯಶ್ರೀ ಸಕ್ರಿ ಕರೆ ನೀಡಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ತಾಲೂಕಿನ
ಗುರುಗುಂಟ ಗ್ರಾಮದ ಪಂಚಾಯತ್ ಕಚೇರಿ ಬಳಿ ಆಯೋಜಿಸಿದ್ದ ಮಹಿಳೆಯರ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರು ಕುಟುಂಬದ ಸಂರಕ್ಷಣೆ ಜೊತೆಗೆ
ತಮ್ಮ ಆರೋಗ್ಯದತ್ತ ಚಿತ್ತ ಹರಿಸಬೇಕೆಂದು ಹೇಳಿದರು.
ತಾಯಿ, ಸಹೋದರಿ, ಮಡದಿ ಸೇರಿ ಜೀವನದಲ್ಲಿ ಹಲವು ಪ್ರಮುಖ ಪಾತ್ರ ವಹಿಸುತ್ತಾಳೆ. ಪುರುಷನ ಏಳ್ಗೆಗೆ ಹೆಣ್ಣು ಕಾರಣೀಕರ್ತಳಾಗಿದ್ದಾಳೆ. ಮಹಿಳೆಯರ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯ, ಹಲ್ಲೆ, ಅತ್ಯಾಚಾರ, ಕೊಲೆಗಳಂಥಹ ಕೃತ್ಯಗಳು ಇವೆ. ಇದಕ್ಕೆ ಕಡಿವಾಣ ಹಾಕುವ ಮೂಲಕ ಸರಕಾರಗಳು
ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಾಯ್ದೆ ರೂಪಿಸುವತ್ತ
ಮುಂದಾಗಬೇಕಿದೆ ಎಂದು ಪ್ರಧಾನ ಕಾರ್ಯದರ್ಶಿ ಶ್ವೇತಾ ಲಾಲಗುಂದಿ
ಮಾತನಾಡಿದರು.
ಗುರಗುಂಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ
ಡಾ.ಕಾವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಶಾ
ಕಾರ್ಯಕರ್ತೆಯರಾದ ಅಂಬಮ್ಮ, ಶಾರದಾ ಅವರನ್ನು ಸನ್ಮಾನಿಸಿ
ಗೌರವಿಸಲಾಯಿತು.
ಬಳಿಕ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 50ಕ್ಕೂ
ಹೆಚ್ಚು ಮಹಿಳೆಯರ ಆರೋಗ್ಯ ತಪಾಸಣೆ ಮಾಡಲಾಯಿತು.
ತಾ.ಪಂ. ಅದ್ಯಕ್ಷೆ ಶ್ವೇತಾ ಪಾಟೀಲ್, ಗುರುಗುಂಟ ಗ್ರಾ.ಪಂ. ಅದ್ಯಕ್ಷೆ ಲಲಿತಾ ರಮೇಶ, ಉಪಾದ್ಯಕ್ಷೆ ಪುಷ್ಪಾ ಚನ್ನಬಸಯ್ಯಸ್ವಾಮಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಬಸಮ್ಮ ಯಾದವ್, ಶೋಭಾ ಕಾಟವೆ, ಕಾರ್ಯದರ್ಶಿ
ಜ್ಯೋತಿ ಸುಂಕದ್, ಮುಖಂಡರಾದ ಭಾನುಮತಿ, ಸ್ಮೀತಾ ಅಂಗಡಿ, ನೀಲಮ್ಮ,
ಹುಲಿಗೆಮ್ಮ ಸೇರಿ ಇತರರು ಇದ್ದರು.

