ಶಿಕ್ಷಣದ ಜೊತೆಗೆ ಕಲೆ, ಸಂಸ್ಕøತಿ ಉಳಿಸಿ ಬೆಳೆಸಲು ಮುಂದಾಗಲು ಕರೆ
ಲಿಂಗಸುಗೂರು : ಶಿಕ್ಷಣದ ಜೊತೆಗೆ ಗ್ರಾಮೀಣ ಭಾಗದಲ್ಲಿನ ಸಂಸ್ಕøತಿ, ಕಲೆ, ಜಾನಪದ ಸಾಹಿತ್ಯವನ್ನು ಹೊಸ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯದ ಅಗತ್ಯತೆ ಇದೆ ಎಂದು ಉಪನ್ಯಾಸಕ ಗದ್ದೆಪ್ಪ ಗುಂಡಸಾಗರ ಕರೆ ನೀಡಿದರು.
ತಾಲೂಕಿನ ಚಿತ್ರನಾಳ ಗ್ರಾಮದಲ್ಲಿ ಬೋಧಿಸತ್ವ ಎಜುಕೇಷನ್ ಮತ್ತು ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೋಧಿಸತ್ವ ಎಜುಕೇಷನ್ ಮತ್ತು ಕಲ್ಚರಲ್ ಟ್ರಸ್ಟ್ ಸಂಸ್ಥೆಯು ಹೊಸ ತಲೆಮಾರಿನ ವಿದ್ಯಾರ್ಥಿ, ಯುವಜನರಿಗೆ ಜನಪದ ಕಲೆ, ಸಾಂಸ್ಕೃತಿಕ ಹಿರಿಮೆಯನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ. ಗ್ರಾಮೀಣ ಸೊಗಡು ಜೀವಂತಿಕೆ ಕಂಡುಕೊಂಡಾಗ ಮಾತ್ರ ಸಾಂಸ್ಕೃತಿಕ ಪರಂಪರೆಗಳು ಉಳಿಯಲು ಸಾಧ್ಯ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಪಿಯು ಉಪನ್ಯಾಸಕರಾಗಿ ಆಯ್ಕೆಯಾಗಿರುವ ಗದ್ದೆಪ್ಪ ಗುಂಡಸಾಗರ, ಭಾರತೀಯ ಸೇನೆಯಲ್ಲಿ ಸೈನಿಕರಾಗಿ ನೇಮಕಗೊಂಡಿರುವ ಯಮನೂರ ಹಿರೇಮನಿ ಅವರಿಗೆ ಬೋಧಿಸತ್ವ-2020 ಪ್ರಶಸ್ತಿ ಪ್ರದಾನ ಹಾಗೂ ಮಾಜಿ ಸೈನಿಕ ವೀರೇಶ ಅಡವಿಭಾವಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.
ಜೀ ಕನ್ನಡ ಸರಿಗಮಪ ಖ್ಯಾತಿಯ ಮೋನಮ್ಮ ಸೋಮನಮರಡಿ, ಗಾಯಕ ರವಿ ರಾಯಚೂರಕರ್, ಮಂಜು ಬೇವಿನಹಾಳ ಕನ್ನಡ ಸುಮಧುರ ಗೀತೆಗಳನ್ನು ಗಾಯನ ಮಾಡಿದರು. ಜಿಲ್ಲೆಯ ಮಿಮಿಕ್ರಿ ಪ್ರತಿಭೆ ಮಲ್ಲು ಬಾಗೂರು ಸಿನಿಮಾ ನಟರು, ರಾಜಕಾರಣಿಗಳ ಧ್ವನಿ ಅನುಕರಣೆ ಮಾಡುವ ಪ್ರೇಕ್ಷಕರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ರವಿ ನಗನೂರು, ಪತ್ರಕರ್ತ ಯಮನೂರು ನಗನೂರು, ಹುಲ್ಲೇಶ ವಾಲೀಕಾರ್, ಗದ್ದೆಪ್ಪ ಬಡಿಗೇರ್, ವೀರೇಶ ಹೆಳವರ, ಮಲ್ಲು ನಾಯಕ, ಪ್ರಕಾಶ ಅಂಗಡಿ, ಪರಶುರಾಮ ಉಪ್ಪಾರ, ಹೊನ್ನಪ್ಪ ನರಕಲದಿನ್ನಿ ಸೇರಿದಂತೆ ಗ್ರಾಮಸ್ಥರು ಇದ್ದರು.

