ರಾಯಚೂರು

ನರೇಗಾ ಕೂಲಿ ಹಣ ಪಾವತಿಗೆ ಆಗ್ರಹಿಸಿ ಧರಣಿ

ಲಿಂಗಸುಗೂರು : ನರೇಗಾ ಯೋಜನೆಯಡಿ ದುಡಿದ ಕೂಲಿಕಾರ್ಮಿಕರಿಗೆ ಬಾಕಿ ಇರುವ 150 ದಿನಗಳ ಕೂಲಿ ಹಣವನ್ನು ಪಾವತಿ ಮಾಡಬೇಕೆಂದು ಆಗ್ರಹಿಸಿ ಈಚನಾಳ ಗ್ರಾಮದ ಕೂಲಿಕಾರ್ಮಿಕರು ಧರಣಿ ನಡೆಸಿದರು.

ಸ್ಥಳೀಯ ತಾಲೂಕು ಪಂಚಾಯತ್ ಕಚೇರಿ ಅವರಣದಲ್ಲಿ
ಸೋಮವಾರ ಧರಣಿ ನಡೆಸಿದ ಕಾರ್ಮಿಕರು, 2021ರ ಫೆಬ್ರುವರಿ 10 ರಿಂದ 25ರ ವರೆಗೆ ಕೆರೆ ಹೂಳೆತ್ತುವ ಕಾಮಗಾರಿಯನ್ನು ಮಾಡಲಾಗಿದೆ.ಸರಕಾರದ ಸುತ್ತೋಲೆಯ ಪ್ರಕಾರ ದಿನಕ್ಕೆ 275 ರೂಪಾಯಿ ಜೊತೆಗೆ 10 ಕೂಲಿ ನೀಡುವ ಆದೇಶವಿದೆ. ಆದರೆ, ಈಚನಾಳ ಪಂಚಾಯಿತಿ ಪಿಡಿಒ ಹಾಗೂ ಜೆಇಗಳು ದಿನಕ್ಕೆ 240 ರೂಪಾಯಿ ಕೂಲಿ ಪಾವತಿ ಮಾಡಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ. 10 ವರ್ಷಗಳವರೆಗೆ ನಿರಂತವಾಗಿ ನರೇಗಾದಡಿ ದುಡಿಯುತ್ತಿರುವ ನಮಗೆ ಸರಕಾರದ ಸುತ್ತೋಲೆಯಂತೆ
ನಿಗದಿಯಾದ ಮೊತ್ತ ಪಾವತಿಯಾಗಿದೆ. ಆದರೆ, 2020-21ನೇ ಸಾಲಿನಲ್ಲಿ ಪ್ರತಿ ಬಾರಿಯ ಕೆಲಸಕ್ಕೆ 260, 242, 240 ರೂಪಾಯಿಗಳಂತೆ ಕೂಲಿ ಮೊತ್ತ ಕಡಿಮೆ ಮಾಡುತ್ತಿರುವುದು ನಮ್ಮಗಳಿಗೆ ನರೇಗಾ ಯೋಜನೆ ಅಧಿಕಾರಿಗಳು
ತಮ್ಮಗಳಿಗೆ ಲಂಚ ನೀಡುತ್ತಿಲ್ಲವೆಂಬ ಕಾರಣಕ್ಕೆ ವೇತನ ಕಡಿಮೆ ಮಾಡುತ್ತಿರುವ ಬಗ್ಗೆ ಅನುಮಾನಗಳು ಮೂಡುತ್ತಿವೆ.ಕೋವಿಡ್ ನಿಂದ ಹಾಗೂ ನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಮೀಣ ಭಾಗದ ನಮ್ಮ ಜೀವನ ನಿರ್ವಹಣೆ ತುಂಬಾ ಕಷ್ಟಕರವಗಿದೆ.

ಕಾರ್ಮಿಕರ ಮೇಲೆ ಗಧಾಪ್ರಹಾರ ಮಾಡುತ್ತಿರುವ ಇಬ್ಬರು ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಕಾರ್ಮಿಕರಿಗೆ ಬಾಕಿ ಇರುವ ವೇತನವನ್ನು ಪಾವತಿ ಮಾಡಬೇಕೆಂದು ಒತ್ತಾಯಿಸಿದರು.


ಕುಪ್ಪಣ್ಣ, ಗದ್ದೆಪ್ಪ, ಶರಣಬಸವ, ಶೇಖರಪ್ಪ, ಸಾದೇವಪ್ಪ,
ಮಾನಮ್ಮ, ಶ್ರೀದೇವಿ ಮಲ್ಲೇಶ, ಮಾನಮ್ಮ, ದೇವಣ್ಣ ಕನ್ನಾಳ,
ಭೀಮಪ್ಪ, ಅಮರೇಶ, ಉಮಾದೇವಿ, ಅಮರಮ್ಮ, ಗೌರಮ್ಮ, ದೇವಮ್ಮ,
ಅಕ್ಕಮಹಾದೇವಿ, ದೇವಪ್ಪ, ನಾಗಪ್ಪ, ಗಂಗಾಧರ, ಮಹಾಂತೇಶ,
ಹನುಮಗೌಡ, ಗದ್ದೆಪ್ಪ ಸೇರಿ ಇತರರು ಧರಣಿಯಲ್ಲಿದ್ದರು

Leave a Reply

Your email address will not be published. Required fields are marked *

error: Content is protected !!