ರಾಯಚೂರು

ಲಿಂಗಸುಗೂರು ತಾಲೂಕಿನಲ್ಲಿ 15 ಲಸಿಕಾ ಕೇಂದ್ರಗಳು ಆರಂಭ ¸ ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆಯಲು ಬಂದ ಹಿರಿಯ ನಾಗರಿಕರು.!

ಲಿಂಗಸುಗೂರು : ಮಹಾಮಾರಿ ಕೊರೊನಾ ಮಟ್ಟಹಾಕಲು ಇರುವ ಕೋವಿಡ್ ಲಸಿಕೆ ಪಡೆಯಲು ಸ್ವಯಂಪ್ರೇರಿತರಾಗಿ ಹಿರಿಯ ನಾಗರಿಕರು ಆಸ್ಪತ್ರೆಗೆ ಬಂದಿರುವುದನ್ನು ಶ್ಲಾಘಿಸಿದ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್‍ರು, ತಾಲೂಕಿನ ಪ್ರತಿಯೊಬ್ಬ ನಾಗರಿಕರೂ ಲಸಿಕೆಯನ್ನು ಪಡೆಯಬೇಕೆಂದು ಕರೆ ನೀಡಿದರು.

ಸೋಮವಾರ ಸರಕಾರಿ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಪಿಂಕ್ ಲಸಿಕಾ ಕೇಂದ್ರವನ್ನು ಆರಂಭಿಸಲಾಗಿತ್ತು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರೂ ಆಗಿರುವ ಪುರಸಭೆಯ ಮಾಜಿ ಅದ್ಯಕ್ಷ ಖಾದರಬಾಷಾ, ಮಹಾಂತಯ್ಯ ಪಂಚಾಕ್ಷರಿಮಠ ಅವರುಗಳು ಲಸಿಕೆ ಏಕಕಾಲಕ್ಕೆ ಲಸಿಕೆ ಹಾಕಿಕೊಂಡರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ಪ್ರತಿದಿನಕ್ಕೆ 200 ಜನ ಫಲಾನುಭವಿಗಳಿಗೆ ಲಸಿಕೆ ಹಾಕಲಾಗುವುದು. ಈಗಾಗಲೇ ತಾಲೂಕಿನ ಲಿಂಗಸುಗೂರು, ಮಸ್ಕಿ,ಮುದಗಲ್, ಸಜ್ಜಲಗುಡ್ಡ, ನಾಗರಹಾಳ ಸೇರಿ ಐದು ಕಡೆಗಳಲ್ಲಿ ಲಸಿಕಾ
ಕೇಂದ್ರಗಳನ್ನು ಆರಂಭಿಸಲಾಗಿದೆ. ಶೀಘ್ರದಲ್ಲಿ 15 ಲಸಿಕಾ
ಕೇಂದ್ರಗಳನ್ನು ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಹಿರಿಯ ನಾಗರಿಕರ ಫಲಾನುಭವಿಗಳ ಸರ್ವೆ ಪ್ರಕಾರ ಸುಮಾರು 35 ಸಾವಿರ ಜನರೂ ಸೇರಿದಂತೆ ತಾಲೂಕಿನ ಪ್ರತಿ ಗ್ರಾಮದಲ್ಲಿರುವ ಮಕ್ಕಳು,ಮಹಿಳೆಯರು, ಪುರುಷರು ಹಿರಿಯರೂ ಸೇರಿ ಮಹಾಮಾರಿಯಿಂದ ರಕ್ಷಣೆ ಪಡೆಯಲು ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು.
ಈಗಾಗಲೇ ಲಸಿಕೆ ಹಾಕಿಸಿಕೊಂಡವರು ಕೊರೊನಾ ಜೊತೆಗೆ ಇತರೆ ವ್ಯಾಧಿಗಳಿಂದ ಮುಕ್ತವಾಗಲು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡಿದ್ದಾರೆ.ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂಧಿಗಳು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!