ರಾಯಚೂರು

ಪತ್ರಕರ್ತ ರಾಘವೇಂದ್ರ ಯತಗಲ್ ಗೆ ಮಾಧ್ಯಮ ಚಕ್ರವರ್ತಿ ಪ್ರಶಸ್ತಿ

ಲಿಂಗಸುಗೂರು : ಸ್ಥಳೀಯ ಪತ್ರಕರ್ತ ರಾಘವೇಂದ್ರ ಯತಗಲ್ ರ ಪತ್ರಿಕಾ ರಂಗದಲ್ಲಿನ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಕರ್ನಾಟಕ ದರ್ಶನ ಕನ್ನಡ ಮಾಸಿಕ ಪತ್ರಿಕೆ ವತಿಯಿಂದ ಕೊಡಮಾಡುವ ಮಾಧ್ಯಮ ಚಕ್ರವರ್ತಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ರಾಜ್ಯದಲ್ಲಿ ಮಾಧ್ಯಮ ಕ್ಷೇತ್ರ, ಆಧ್ಯಾತ್ಮಿಕ, ಧಾರ್ಮಿಕ, ಸಹಕಾರ ರಂಗ, ಶಿಕ್ಷಣ, ಸಾಹಿತ್ಯ, ನ್ಯಾಯಾಂಗ, ಕೃಷಿ, ಸೈನಿಕ ಸೇವೆ, ಉದ್ಯೋಗ, ಚಿತ್ರರಂಗ, ಸಹಕಾರ ರಂಗ, ರಂಗಭೂಮಿ, ಸರ್ವಧರ್ಮ ಪ್ರಜ್ಞಾವಂತ ಹಿರಿಯರು, ರಾಜಕೀಯ ಸೇರಿ ವಿವಿಧ ಇಲಾಖೆಯ ಸರಕಾರಿ ಸೇವೆ ಕಾನೂನು-ಸುವ್ಯವಸ್ಥೆ ಶಾಂತಿ ಪಾಲನೆಯ ಹಿರಿಮೆಯನ್ನು ಗುರುತಿಸುವ ನಿಟ್ಟಿನಲ್ಲಿ, ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ ಬರುವ ಏಪ್ರಿಲ್ ತಿಂಗಳ 25 ರಂದು ಜಿಲ್ಲಾ ಕೇಂದ್ರ ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕಳೆದ 7 ವರ್ಷಗಳಿಂದ ನಡೆಯುತ್ತಿರುವ ಈ ಸಮಾರಂಭ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜರುಗುತ್ತಿದೆ. ಈ ಬಾರಿ ರಾಯಚೂರು ಜಿಲ್ಲೆಯಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ ಎಂದು ಆಯೋಜಕರು ಹಾಗೂ ಸಂಪಾದಕರಾದ ಎಸ್.ಎಸ್.ಪಾಟೀಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!