ರಾಯಚೂರು

ಕರ್ತವ್ಯಲೋಪ : ಲಿಂಗಸುಗೂರು ಪುರಸಭೆ ದ್ವಿದಸ ಶಿವಲಿಂಗ ಅಮಾನತ್ತು

ಲಿಂಗಸುಗೂರು : ಕರ್ತವ್ಯಲೋಪದ ಆರೋಪದ ಮೇಲೆ ಜಿಲ್ಲಾಧಿಕಾರಿಗಳು ಸ್ಥಳೀಯ ಪುರಸಭೆ ದ್ವಿತೀಯ ದರ್ಜೆ ಸಹಾಯಕ ಶಿವಲಿಂಗ ಮೇಗಳಮನಿಯವರನ್ನು ಸೇವೆಯಿಂದ ಅಮಾನತ್ತು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.


ಆಡಳಿತಾಧಿಕಾರಿಗಳ ಅವಧಿಯಲ್ಲಿ ಎನ್.ಎ.ಲೇಔಟ್, ಅಕ್ರಮ ಖಾತೆ ಮತ್ತು ಆರ್ಥಿಕ ನಷ್ಟ ಉಂಟು ಮಾಡಿದ ಶಿವಲಿಂಗ ಮೇಗಳಮನಿಯವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಉಪವಿಭಾಗಾಧಿಕಾರಿಗಳು ಪತ್ರ ಬರೆದಿದ್ದರು. ಅಲ್ಲದೇ, ಇವರ ಕರ್ತವ್ಯಲೋಪದ ಬಗ್ಗೆ ಹಲವು ದೂರುಗಳು ಬಂದಿದ್ದವು. ಎಲ್ಲವನ್ನೂ ಪರಿಶೀಲಿಸಲಾಗಿ ಮೇಲ್ನೋಟಕ್ಕೆ ಕರ್ತವ್ಯಲೋಪ ಸಾಬೀತಾಗಿದೆ. ಶಿವಲಿಂಗರ ವಿರುದ್ಧವಾಗಿ ಬಂದ ದೂರುಗಳ ಬಗ್ಗೆ ಮೂರು ದಿನಗಳ ಬಗ್ಗೆ ಉತ್ತರ ಸಲ್ಲಿಸುವಂತೆ ಜೂನ್ 11, 2021 ರಂದು ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಸಮರ್ಪಕವಾಗಿ ಉತ್ತರ ಬಾರದೇ ಇದ್ದಲ್ಲಿ, ಅಮಾನತ್ತು ಮಾಡಲಾಗಿದೆ.


ಶಿವಲಿಂಗರ ಲೀನ್‍ಅನ್ನು ಕವಿತಾಳ ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ದ್ವಿತಿಯ ದರ್ಜೆ ಸಹಾಯಕ ಹುದ್ದೆಗೆ ವರ್ಗಾಯಿಸಿದೆ. ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!