ಲಿಂಗಸುಗೂರು : ವಿಕಲಚೇತನರಿಗೆ ದಿನಸಿ ಕಿಟ್‍ಗಳ ವಿತರಣೆ
ಲಿಂಗಸುಗೂರು : ಲಾಕ್‍ಡೌನ್‍ನಲ್ಲಿ ನಿರುದ್ಯೋಗಿಗಳಾಗಿರುವ ಬಡ ವಿಕಲಚೇತನರು ಜೀವನ ಸಾಗಿಸುವುದು ದುಸ್ಥರವಾಗಿದ್ದು, ಅವರ ಸಂಕಷ್ಟಕ್ಕೆ ಸ್ಪಂಧಿಸುವ ನಿಟ್ಟಿನಲ್ಲಿ ಶನಿವಾರ ಸ್ಥಳೀಯ ವಿಸಿಬಿ ಕಾಲೇಜು ಆವರಣದಲ್ಲಿ ಅಜೀಂ ಪ್ರೇಮಜೀ ಫೌಂಡೇಶನ್ ವತಿಯಿಂದ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.
ಕೋವಿಡ್ ಎರಡನೇ ಅಲೆಯ ಪರಿಣಾಮ ತಿಂಗಳುಗಳಿಂದ ಆಗಿರುವ ಲಾಕ್‍ಡೌನ್ ಪರಿಣಾಮ ಜೀವನ ನಡೆಸುವುದು ಕಷ್ಟಕರವಾಗಿದೆ. ಅಲ್ಲದೇ 2-3 ತಿಂಗಳುಗಳಿಂದ ಮಾಸಾಶನ ಬಾರದೇ ಸಂಕಷ್ಟದಲ್ಲಿರುವ ವಿಕಲಚೇತನರ ಕುಟುಂಬಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ದಿನಸಿ ಕಿಟ್‍ಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಫೌಂಡೇಶನ್‍ನ ತಾಲೂಕು ಸಂಯೋಜಕ ಹೇಮಂತ ತಿಳಿಸಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಆರ್‍ಪಿಡಿ ಟಾಸ್ಕ್‍ಫೂರ್ಸ್ ಸಮಿತಿಯ ರಾಜ್ಯ ಕಾರ್ಯದರ್ಶಿ ಸುರೇಶ ಪಿ.ಭಂಡಾರಿ ಮುದಗಲ್, ಚೇತನ ಸಂಸ್ಥೆಯ ಅದ್ಯಕ್ಷ ಹುಸೇನ್‍ಬಾಷಾ ಬನ್ನಿಗೋಳ, ಆರ್‍ಪಿಡಿ ಟಾಸ್ಕ್‍ಫೋರ್ಸ್ ಪದಾಧಿಕಾರಿಗಳಾದ ಅಸ್ಕಿಹಾಳ ನಾಗರಾಜ, ವೀರಭದ್ರಪ್ಪ, ಶಿವಕುಮಾರ, ಪವಡೆಮ್ಮಾ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

