ರಾಯಚೂರು

ಸಂಸದ ರಾಜಾ ಅಮರೇಶ್ವರ ನಾಯಕ, ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಅಭಿಮಾನಿಗಳಿಂದ ಖಾಸಗಿ ಶಾಲಾ ಶಿಕ್ಷಕರಿಗೆ ದಿನಸಿ ಕಿಟ್‍ಗಳ ವಿತರಣೆ

ಲಿಂಗಸುಗೂರು : ಕೋವಿಡ್ ಸಂಕಷ್ಟದ ಕಾಲದಲ್ಲಿ ಖಾಸಗಿ ಶಾಲಾ ಶಿಕ್ಷಕರು ಜೀವನ ನಡೆಸುವುದು ದುಸ್ತರವಾಗಿದೆ. ಸರಕಾರ ಇವರಿಗೆ 5 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಲಾಕ್‍ಡೌನ್‍ನಿಂದ ಕಳೆಗುಂದಿರುವ ಬಡ ಶಿಕ್ಷಕರ ಕುಟುಂಬಕ್ಕೆ ನಮ್ಮಿಂದ ಅಳಿಲು ಸೇವೆ ಮಾಡುವ ಪ್ರಯತ್ನ ಇದಾಗಿದೆ ಎಂದು ಬಿಜೆಪಿ ಯುವ ಮುಖಂಡ ಸಂಜೀವಕುಮಾರ ಕಂದಗಲ್ ಹೇಳಿದರು.


ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಅಭಿಮಾನಿ ಬಳಗದಿಂದ ಸ್ಥಳೀಯ ಶ್ರೀ ಉಟಗನೂರು ಬಸವಲಿಂಗ ತಾತಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಿನಸಿಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಬಡವರಿಗೆ ಲಾಕ್‍ಡೌನ್ ಅವಧಿಯಲ್ಲಿ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಕೋವಿಡ್‍ನಿಂದ ಮೃತಪಟ್ಟವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಧನ ಘೋಷಣೆ ಮಾಡಿರುವುದು ಬಡ ಕುಟುಂಬಗಳಿಗೆ ನೆರವಾಗಿದೆ. ಸಂಸದ ರಾಜಾ ಅಮರೇಶ್ವರ ನಾಯಕರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡುತ್ತಿದ್ದು, ಹೆದ್ದಾರಿಗಳ ಅಭಿವೃದ್ಧಿ ಮತ್ತು ಮೇಲ್ದರ್ಜೆಗೇರಿಸಲು ಶ್ರಮ ವಹಿಸುತ್ತಿದ್ದಾರೆ. ಅಂತೆಯೇ ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರೂ ಮಾಜಿ ಶಾಸಕರಾಗದ್ದರೂ ಕ್ಷೇತ್ರದ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದು, ಅವರ ಅಭಿಮಾನಿಗಳಾದ ನಾವುಗಳು ಅವರ ಹೆಸರಿನಲ್ಲಿ ಬಡ ಶಿಕ್ಷಕರಿಗೆ ನೆರವಾಗುವತ್ತ ಈ ಸತ್ಕಾರ್ಯ ಮಾಡುತ್ತಿದ್ದೇವೆಂದು ಕಂದಗಲ್ ಹೇಳಿದರು.


ಸುಮಾರು 50 ಜನರಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷಕುಮಾರ ಕಡಿವಾಲರ್, ಬಿಜೆಪಿ ಮುಖಂಡರಾದ ಹುಸೇನಪ್ಪ ಕಳ್ಳಿಲಿಂಗಸುಗೂರು, ಶರಣಪ್ಪ ನಾಯಕ, ಸಂಜೀವ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಜಾವೀದ್ ಹುಸೇನ್, ರವಿಚಂದ್ರ ಎನ್., ಶಬ್ಬೀರಸಾಬ, ಶರಣಪ್ಪ, ಫಯಾಜ್, ಕಾಳಿಂಗಪ್ಪ, ವೆಂಕಟೇಶ, ಅಮರೇಶ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!