ಲಿಂಗಸುಗೂರು : ಜಪ್ತಿ ಮಾಡಿದ್ದ 4.56 ಲಕ್ಷ ರೂಪಾಯಿ ಮಧ್ಯ ನಾಶ
ಲಿಂಗಸುಗೂರು : ಕಳೆದ ಮೂರು ವರ್ಷಗಳಿಂದ ಬೇರೆ ಬೇರೆ
ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ 4.56 ಲಕ್ಷ ರೂಪಾಯಿ ವೆಚ್ಚದ
ಮಧ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪಟ್ಟಣದ ಹೊರವಲಯದಲ್ಲಿ ನಾಶಪಡಿಸಿದರು.
ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮದ್ಯ 1145 ಲೀಟರ್, 125.3 ಲೀಟರ್ ಬಿಯರ್, 153.5 ಲೀಟರ್ ಕಳ್ಳ ಭಟ್ಟಿ ಸಾರಾಯಿ, 648 ಲೀಟರ್ ಬೆಲ್ಲದ ಕೊಳೆ, 10 ಕೆಜಿ ಬೆಲ್ಲ ಸೇರಿ ಒಟ್ಟು 4 ಲಕ್ಷ 56 ಸಾವಿರ ರೂಪಾಯಿ ಮೂಲ್ಯದ ಮಧ್ಯ ಹಾಗೂ
ಸಾಮಗ್ರಿಗಳನ್ನು ಅಧಿಕಾರಿಗಳು ನಾಶಪಡಿಸಿದರು.
ಅಬಕಾರಿ ಉಪ ಅಧಿಕ್ಷಕ ಹನುಮಂತಪ್ಪ ಗುತ್ತೇದಾರ, ಉಪ
ನಿರೀಕ್ಷಕಿಯರಾದ ಕವಿತಾ, ಸರಸ್ವತಿ, ಇನ್ಸಪೆಕ್ಟರ್‍ಗಳಾದ ಲಿಂಗರಾಜು,ಮಹ್ಮದ್ ಹುಸೇನ್, ಶೈಲಾಜ್, ಸಿಬ್ಬಂದಿಗಳಾದ ಮಂಜುನಾಥ, ಮಾಳಿಂಗರಾಯ,ಅಮರೇಶ, ಮಂಜುನಾಥ ಚಂದ್ರಕಾಂತ, ರಾಜೇಂದ್ರ, ನಂದಪ್ಪ, ಫರಾನ್,ತಿರುಪತಿ ಆನಂದ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಈ ಸಂದರ್ಭದ್ದಲ್ಲಿ
ಇದ್ದರು.

