ರಾಯಚೂರು

ಲಿಂಗಸುಗೂರು : ಮೂಲ ಸೌಕರ್ಯಕ್ಕೆ ವಾರ್ಡ್ ನಿವಾಸಿಗಳ ಆಗ್ರಹ

ಲಿಂಗಸುಗೂರು : ಸ್ಥಳೀಯ ಪುರಸಭೆ ವ್ಯಾಪ್ತಿಯ 7ನೇ ವಾರ್ಡ್‍ನಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ವಾರ್ಡ್ ನಿವಾಸಿಗಳು ಮುಖ್ಯಾಧಿಕಾರಿ ನರಸಪ್ಪ ತಶೀಲ್ದಾರ್‍ರಿಗೆ ಮನವಿ ಸಲ್ಲಿಸಿದರು.

ಬಸ್ಟಾಂಡ್ ಬಳಿ ಇರುವ 7ನೇ ವಾರ್ಡ್‍ನಲ್ಲಿ ಚರಂಡಿ, ರಸ್ತೆ, ವಿದ್ಯುತ್ ದೀಪ ಸೇರಿ ಮೂಲ ಸವಲತ್ತುಗಳು ಮಾಯವಾಗಿವೆ. ಈ ವಾರ್ಡ್‍ನ ಸದಸ್ಯರು ಅಭಿವೃದ್ಧಿಗೆ ಆಧ್ಯತೆ ನೀಡುತ್ತಿಲ್ಲ. ಮಳೆ ಬಂದರೆ ರಸ್ತೆಗಳು ಕೆಸರುಗದ್ದೆಯಾಗುತ್ತವೆ. ಖಾಲಿ ನಿವೇಶನಗಳಲ್ಲಿ ಜಾಲಿಮುಳ್ಳುಗಳು ಬೆಳೆದು ವಾತಾವರಣ ಕಲುಶಿತಗೊಂಡಿದೆ. ವಾರ್ಡ್‍ನಲ್ಲಿರುವ ಹಳ್ಳ ಸ್ವಚ್ಛತೆ ಇಲ್ಲದ ಕಾರಣ ರೋಗಗಳು ಉಲ್ಬಣಿಸುತ್ತಿವೆ.ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನರಿದ್ದಾರೆ. ಕೂಡಲೇ ವಾರ್ಡ್‍ಗೆ ಭೇಟಿ ನೀಡಿ ಪರಿಶೀಲನೆ ಮಾಡುವ
ಮೂಲಕ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.


ಮುಖಂಡರಾದ ಗೌಡಪ್ಪಗೌಡ, ರಾಜಶೇಖರಗೌಡ ಪಾಟೀಲ್, ಸುರೇಶ ಮೇಟಿ, ಯಂಕೋಬ, ಹನುಮಂತಪ್ಪ ನಾಯಿಕೊಡೆ, ಬಸವರಾಜ ಅಂಗಡಿ,ಶ್ಯಾಮ್ ಸೇಟ್, ಅಶೋಕ, ಅಂಬಾಜಿ, ಸಿದ್ಧು, ತಿಪ್ಪಣ್ಣ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!