ರಾಯಚೂರು

ನಾಳೆ ಲಿಂಗಸುಗೂರಲ್ಲಿ ಅನಿಲ ಉತ್ಪಾದನಾ ಘಟಕ ಆರಂಭ

ಲಿಂಗಸುಗೂರು : ದಿವ್ಯ ದೃಷ್ಠಿ ಫೌಂಡೇಶನ್ ಮುದಗಲ್, ಈಶ್ವರ ದೇವಸ್ಥಾನ ಸಮಿತಿಯ ಆಡಳಿತ ಮಂಡಳಿಗಳ ಸಹಯೋಗದಲ್ಲಿ ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಅನಿಲ ಉತ್ಪಾದನಾ ಘಟಕವನ್ನು ಆರಂಭಿಸಲಾಗುವುದು ಎಂದು ಸ್ವಾಮಿ ವಿವೇಕಾನಂದ ಸೇವಾಶ್ರಮ ಬೆಂಗಳೂರು ಅವರ ಸ್ವಯಂ ಸೇವಕ ವ್ಯವಸ್ಥಾಪಕರಾದ ಡಾ.ಗುರುರಾಜ ದೇಶ್ಪಾಂಡೆ ಹೇಳಿದರು.


ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಾಲೂಕಿನಲ್ಲಿ ಕೊವಿಡ್ ಸೊಂಕಿತರಿಗೆ ಅಗತ್ಯವಾಗುವ ಆಮ್ಲಜನಕವನ್ನು ಪೂರೈಕೆ ಮಾಡಲು ಬೇಕಾಗುವಷ್ಟು ಸಾಮಥ್ರ್ಯದ ಅನಿಲವನ್ನು ಈ ಘಟಕದಲ್ಲಿ ಉತ್ಪಾದನೆ ಮಾಡಲಾಗುವುದು. ಸೇವಾ ಇಂಟರ್‍ನ್ಯಾಷನಲ್ (ಯುಎಸ್‍ಎ) ಇವರಿಂದ 1.90 ಕೋಟಿ ರೂಪಾಯಿ ವೆಚ್ಚದಲ್ಲಿ ಘಟಕವನ್ನು ಪ್ರಾರಂಭಿಸಲಾಗುವುದು. ಇದರ ಶಂಕುಸ್ಥಾಪನೆಯನ್ನು ಜುಲೈ 08 ಗುರುವಾರ ದಂದು ನೆರವೇರಿಸಲಾಗುವುದು ಎಂದರು.


ಸಂಘಟಕರಾದ ಮಲ್ಲಿಕಾರ್ಜುನ ವಾರದ್, ಡಾ.ಶರಣಗೌಡ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!