‘ಲಸಿಕೆ ಬಗ್ಗೆ ಹಿಂಜರಿಕೆ ಬೇಡ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬನ್ನಿ’ ಲಿಂಗಸುಗೂರು : ಕೋವಿಡ್ ಲಸಿಕೆ ಪಡೆದ ಹಿರಿಯ ಪತ್ರಕರ್ತ ಮುತಾಲಿಕ್
ಲಿಂಗಸುಗೂರು : ಲಸಿಕೆಯ ಬಗ್ಗೆ ಹಿಂಜರಿಯದೇ,ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು
ಮುಂದಾಗಬೇಕು ಎಂದು ಹಿರಿಯ ಪತ್ರಕರ್ತ ಗುರುರಾಜ ಮುತಾಲಿಕ್ ಕರೆ ನೀಡಿದರು.
ಸ್ಥಳೀಯ ಸರಕಾರಿ ಆಸ್ಪತ್ರೆಗೆ ಮಂಗಳವಾರ ತೆರಳಿ ಲಸಿಕೆ
ಹಾಕಿಸಿಕೊಂಡು ಯುವಕರು, ಮಹಿಳೆಯರು, ಹಿರಿಯ ನಾಗರಿಕರು,ಮಕ್ಕಳು ಸೇರಿ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಕೆಲವರು ಲಸಿಕೆ ಬಗ್ಗೆ ಹಿಂಜರಿಯುತ್ತಿದ್ದು, ಈ ಬಗ್ಗೆ ಯಾವುದೇ ಗೊಂದಲಕ್ಕೆ
ಒಳಗಾಗುವುದು ಬೇಡ. ಆತ್ಮಸ್ಥೈರ್ಯದೊಂದಿಗೆ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಡ್ ಜೊತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಈ ಲಸಿಕೆ ಹೆಚ್ಚಿಸುತ್ತದೆ. ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಎಂದು ಈಗಾಗಲೇ ವೈದ್ಯಲೋಕ ದೃಢಪಡಿಸಿದೆ. ಸ್ವಯಂ
ಪ್ರೇರಿತರಾಗಿ ಆಸ್ಪತ್ರೆಗೆ ಬಂದು ಲಸಿಕೆ ಪಡೆಯಲು ಮುತಾಲಿಕ್ ಕರೆ ನೀಡಿದರು.
ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂಧಿಗಳು ಈ ಸಂದರ್ಭದಲ್ಲಿಇದ್ದರು

