ಸರ್ವರಿಗೂ ಉಚಿತವಾಗಿ ಕೋವಿಡ್ ವ್ಯಾಕ್ಸೀನ್ ನೀಡಲು ಹಾಗೂ ಆಗತ್ಯ ಆರ್ಥಿಕ ನೆರವಿಗಾಗಿ ಒತ್ತಾಯಿಸಿ SFI ಪ್ರತಿಭಟನೆ.
ಕವಿತಾಳ : ಸರ್ವರಿಗೂ ಉಚಿತವಾಗಿ ಕೋವಿಡ್ ವ್ಯಾಕ್ಸಿನೇಷನ್ ನೀಡಲು ಒತ್ತಾಯಿಸಿ ಮತ್ತು ಕೊವೀಡ್ಶೀಲ್ಡ್ ಲಸಿಕೆಗಳನ್ನು ದುಬಾರಿ ಬೆಲೆಗೆ ಮಾರಾಟ ನೀತಿ ವಿರೋಧಿಸಿ, ದೇಶದ ಜನರಿಗೆ ಅಗತ್ಯ ಆಕ್ಸಿಜನ್, ವೆಂಟಿಲೇಟರ್, ಬೆಡ್, ಆಸ್ಪತ್ರೆಗಳು, ವೈದ್ಯರನ್ನು ಒದಗಿಸಬೇಕೆಂದು ಹಾಗೂ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಕುಟುಂಬಗಳಿಗೆ ಆಗತ್ಯ ನೆರವು ನೀಡಲು ಆಗ್ರಹಿಸಿ ಇಂದು SFI ಕೇಂದ್ರ ಸಮಿತಿಯು ಕಚೇರಿ ಮತ್ತು ಕಾರ್ಯಕರ್ತರ ಮನೆಯ ಮುಂದೆ ದೇಶಾದ್ಯಂತ ಹೋರಾಟಕ್ಕೆ ಕರೆ ಕೊಟ್ಟಿತ್ತು ಇದರ ಭಾಗವಾಗಿ ಕವಿತಾಳ ನಗರ ಘಟಕದ ನೇತೃತ್ವದಲ್ಲಿ ಪಟ್ಟಣದ ರಾಯಚೂರು ರಸ್ತೆಯ ( ಬೋಸ್ ರಾಜು) ಕಾಲೋನಿಯಲ್ಲಿರುವ SFI ನ ಕಚೇರಿಯ ಮುಂಭಾಗದಲ್ಲಿ ಹೋರಾಟ ವನ್ನು ಮಾಡಲಾಯಿತು.
ಹೋರಾಟ ವನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಇಡೀ ದೇಶ ಕೋವಿಡ್ ನಿಂದ ತತ್ತರಿಸುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಅದನ್ನು ಸಂಪೂರ್ಣ ವಾಗಿ ನಿರ್ಲಕ್ಷ್ಯ ಮಾಡಿ ಲಕ್ಷಾಂತರ ಜನರನ್ನು ಸೇರಿಸಿ ಚುನಾವಣೆ ನಡೆಸಿ ಅಧಿಕಾರಕ್ಕಾಗಿ ಕಸರತ್ತು ನಡೆಸಿತ್ತು. ಚುನಾವಣೆ ಮುಗಿದ ನಂತರ ಲಾಕ್ ಡೌನ್ ಮಾಡಿ ಜನತೆಯ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ರೂಪಾಂತರ ವೈರಸ್ ಹೆಚ್ಚಾಗಲು ಈ ಸರ್ಕಾರಗಳೆ ಕಾರಣ ಲಾಕ್ ಡೌನ್ ನಿಂದ ಹೆಚ್ಚಾಗಿ ಏನು ಪ್ರಯೋಜನ ಇಲ್ಲ ಬದಲಾಗಿ ಆರೋಗ್ಯ ವ್ಯವಸ್ಥೆ ಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ವಹಿಸಿ ಆಗತ್ಯ ಬೆಡ್, ವೆಂಟಿಲೇಟರ್, ಆಕ್ಸಿಜನ್ ಟೆಸ್ಟಿಂಗ್ ಪ್ರಕ್ರಿಯೆ ಯನ್ನು ತ್ವರಿತಗೊಳಿಸಿ ಎಲ್ಲರಿಗೂ ಉಚಿತವಾದ ಚಿಕಿತ್ಸೆ ಯನ್ನು ಒದಗಿಸಬೇಕೆಂದು ಆಗ್ರಹಿಸಿದರು.
ನಂತರ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಮಾತನಾಡಿ ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾದ ಸರ್ಕಾರಗಳು ಈಗ ಹಸಿದ ಹೊಟ್ಟೆಗೆ ಅನ್ನವನ್ನು ನೀಡಲು ಸಾಧ್ಯವಾಗುತ್ತಿಲ್ಲ ಅಕ್ಕಿ ಕೇಳಿದರೆ ಸಾಯಲಿ ಅಂತ ಹೇಳುತ್ತಿದ್ದಾರೆ. ಪಕ್ಕದ ಕೇರಳ ಸರ್ಕಾರ ಇಡೀ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಕೊರೋನಾ ವನ್ನು ನಿಯಂತ್ರಣ ಮಾಡಿ ಮಾದರಿಯಾಗಿದೆ. ಆದರೆ ನಮ್ಮ ಸರ್ಕಾರಗಳು ಮಾತ್ರ ನಿಚತನಕ್ಕೆ ಸಾಕ್ಷಯಾಗಿವೆ ಕೂಡಲೇ ರಾಜಿನಾಮೆ ನೀಡಬೇಕು ಎಂದರು.
ಹೋರಾಟದಲ್ಲಿ SFI ಕವಿತಾಳ ನಗರ ಘಟಕದ ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ, ಮುಖಂಡರಾದ ನಾಗಮೋಹನ್ ಸಿಂಗ್, ಮಲ್ಲಿಕಾರ್ಜುನ, ನಾಗರಾಜ, ಗಣೇಶ್, ಬಿ.ಸೇರಿದಂತೆ ಅನೇಕರಿದ್ದರು.

