ರಾಯಚೂರು

ಕ್ಷಯ ಮುಕ್ತ ರಾಯಚೂರು : ಬೀದಿ ನಾಟಕದ ಮೂಲಕ ಜನ ಜಾಗೃತಿ

ಲಿಂಗಸುಗೂರು : ಕ್ಷಯರೋಗ ಮುಕ್ತ ರಾಯಚೂರು
ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಪಟ್ಟಣದಲ್ಲಿ ಬೀದಿನಾಟಕದ ಮೂಲಕ ಜನ ಜಾಗೃತಿಗೆ ಮುಂದಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್‍ರು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಎರಡು ವಾರಗಳ ಕೆಮ್ಮು, ಸಂಜೆಯ ಜ್ವರ, ಹಸಿವು ಆಗದೇ ಇರುವುದು, ಕೆಮ್ಮಿದಾಗ ಕಫ ಬರುವುದು ಕ್ಷಯ ರೋಗದ ಲಕ್ಷಣಗಳಾಗಿವೆ. ಇಂಥಹ ಯಾವುದೇ ಲಕ್ಷಣಗಳು
ಕಂಡುಬಂದಲ್ಲಿ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು.

ಕ್ಷಯರೋಗ (ಟಿ.ಬಿ.)ದ ಲಕ್ಷಣಗಳು ಕಂಡುಬಂದರೆ ಸರಕಾರಿ
ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಜೊತೆಗೆ ಆರೋಗ್ಯ ಪ್ರೋತ್ಸಾಹ ಧನವಾಗಿ ಪೌಷ್ಠಿಕ ಆಹಾರ ಸೇವನೆಗೆ ಮಾಸಿಕ 500 ರೂಪಾಯಿಗಳನ್ನು ನೀಡಲಾಗುತ್ತದೆ. ರೋಗ ಲಕ್ಷಣಗಳನ್ನು ಅಲ್ಲಗಳೆಯಬೇಡಿ.ಸಕಾಲಕ್ಕೆ ಚಿಕಿತ್ಸೆ ಪಡೆದರೆ ರೋಗ ವಾಸಿಯಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ
ಕ್ಷಯರೋಗ ನಿರ್ಮೂಲನಾ ವಿಭಾಗ ಮತ್ತು ಮುಖಾಮುಖಿ ರಂಗ ಸಂಸ್ಥೆ ಜಹೀರಾಬಾದ್ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಕಲಾವಿದರು, ಸ್ಥಳೀಯ ಇಂದಿರಾ ಪಾರ್ಕ್ ಬಳಿ ಬೀದಿ ನಾಟಕವಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಕಲಾ ತಂಡದ ನಿರ್ಮಲಾ, ವೇಣುಗೋಪಾಲ, ಹರಿಕಥಾ ಮಂಜು, ಡಿಸಿ ಕುಮಾರ, ಕೊಟ್ರೇಶ, ಬಸವರಾಜ, ಮಮತಾ, ಇಂದಿರಮ್ಮ, ಆರೋಗ್ಯ ಇಲಾಖೆ ಸಿಬ್ಬಂಧಿಗಳಾದ ರವಿಕುಮಾರ ಹೂಗಾರ, ಮಹಾಂತೇಶ ಬ್ಯಾಳಿ,ಅಮರೇಶ, ಬಸವರಾಜ ಸುರಪುರ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!